ನಾಗನಿಗೆ ಹಣ್ಣು ಕಾಯಿ,ತನು ಸೇವೆ ಅರ್ಪಿಸಿದ ಭಕ್ತರು

ಕುಂದಾಪುರ:ಪರಶುರಾಮ ಸೃಷ್ಟಿಯ ನೆಲದಲ್ಲಿ ನಾಗನಿಗೆ ಅಗ್ರಸ್ಥಾನವಿದೆ.ನಾಗ ದೇವರ ಪೂಜೆ ಮಾಡಲು ಮಡಿ ಮೈಲಿಗೆ ಅತ್ಯವಶ್ಯಕ.ರಾಜ್ಯದ ಬೇರೆ ಬೇರೆ ಭಾಗದಲ್ಲಿ ನಾಗ ದೇವರ ಶಿಲೆಯನ್ನು ಮುಟ್ಟಿ ಪೂಜೆ ಮಾಡಿದರೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರು ಬಿಟ್ಟರೆ ಬೇರೆ ಯಾವ ಜಾತಿಗೂ ನಾಗ ಶಿಲೆಯನ್ನು ಮುಟ್ಟಿ ಪೂಜೆ ಮಾಡುವುದು ನಿಷಿದ್ಧ.ಇಲ್ಲಿನ ಪ್ರತಿ ಕುಟುಂಬಕ್ಕೂ ಮೂಲ ನಾಗ ದೇವರಿದ್ದು ಸಂತಾನ ಕಾರಕನೆಂದೆ ಪೂಜಿಸಲಾಗುತ್ತದೆ.ನಾಗರ ಪಂಚಮಿ ಹಬ್ಬದ ದಿನದಂದು ಮೂಲ ನಾಗನಿಗೆ ಹಣ್ಣು ಕಾಯಿ ಸೇವೆ ನೀಡಿ ತನು ಹಾಕಲಾಗುತ್ತದೆ.ಇದು ಅನಾದಿ ಕಾಲದಿಂದಲೂ […]

ಕಾರವಾರ:ಮುರಿದು ಬಿದ್ದ ಕಾಳಿ ಸೇತುವೆ,ಮುಂದುವರೆದ ಸೇತುವೆ ದುರ್ಘಟನೆ

ಕಾರವಾರ:ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾರವಾರ ಮತ್ತು ಗೋವಾಕ್ಕೆ ಸಂಪರ್ಕಿಸುವ ಸುಮಾರು 40 ವರ್ಷಕ್ಕೂ ಹಳೆಯದಾದ ಕಾಳಿ ಸೇತುವೆ ಮಂಗಳವಾರ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದೆ.ದೇಶಾದ್ಯಂತ ಸೇತುವೆ ಮುರಿದು ಬೀಳುವ ದುರ್ಘಟನೆ ಮುಂದುವರೆದಿದ್ದು ಜನರು ಆತಂಕಿತರಾಗಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕೋಡಿಭಾಗ್ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೃಹತ್ ಸೇತುವೆ ಯಾವುದೆ ರೀತಿಯ ಮುನ್ಸೂಚನೆ ಸಿಗದೆ ಇರುವ ರೀತಿಯಲ್ಲಿ ನದಿಗೆ ರಾತ್ರೋರಾತ್ರಿ ಉರುಳಿ ಬಿದ್ದಿದೆ.ಈ ವೇಳೆ ಸೇತುವೆ ಮೇಲೆ ಸಾಗುತ್ತಿದ್ದ […]

ಮಹಾರಾಜ ಸ್ವಾಮಿ ಶ್ರೀವರಾಹ ದೇವರ ಜಾತ್ರಾ ಮಹೋತ್ಸವ ಸಂಪನ್ನ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯಲಿರುವ ಕರ್ಕಾಟಕ ಅಮಾವಾಸ್ಯೆ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಭಾನುವಾರ ನಡೆಯಿತು.ಕರ್ಕಾಟಕ ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀವರಾಹ ಸ್ವಾಮಿ,ಶ್ರೀವಿಷ್ಣು,ಶ್ರೀ ನರಸಿಂಹ ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಮತ್ತು ಹಣ್ಣು ಕಾಯಿ ಸೇವೆಯನ್ನು ನೆರವೇರಿಸಲಾಯಿತು.ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದು ಸೇವೆಯನ್ನು ಅರ್ಪಿಸಿದರು.ಪಂಚಕಜ್ಜಾಯ,ಪ್ರಸಾದ ವಿತರಣೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ […]

You cannot copy content of this page