ಮೋದಿ ಹುಟ್ಟು ಹಬ್ಬ,ಉಚಿತ ಆಟೋ ಸೇವೆ

ಕುಂದಾಪುರ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಮೋದಿ ಅಭಿಮಾನಿ ಉದಯ ಖಾರ್ವಿ ಅವರು ತ್ರಾಸಿ ಮತ್ತು ಸುತ್ತಮುತ್ತಲಿನ 15 ಕಿ.ಮೀ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಉಚಿತ ಆಟೋ ಸೇವೆಯನ್ನು ನೀಡುವುದರ ಮುಖೇನ ಮೋದಿ ಮೇಲಿನ ತಮ್ಮ ಅಭಿಮಾನವನ್ನು ವಿಶೇಷವಾದ ರೀತಿಯಲ್ಲಿ ತೋರ್ಪಡಿದರು.

ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಕುಂದಾಪುರ ನೂತನ ಕಾರ್ಯಕಾರಿ ಸಮಿತಿ ಆಯ್ಕೆ

ಕುಂದಾಪುರ:ಸುಮಾರು 96 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಅಂಡ್ ರೀಡಿಂಗ್ ರೂಮ್ ಸೊಸೈಟಿ (ರಿ) ಕುಂದಾಪುರ ಅದರ ದ್ವೈವಾರ್ಷಿಕ ಮಹಾಸಭೆ ಚಿತ್ತರಂಜನ್ ಹೆಗ್ಡೆ ಹರ್ಕೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಕಾಲಾವರ ವಾಚಿಸಿದರು.2024-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.ನೂತನ ಅಧ್ಯಕ್ಷರಾಗಿ ಸುಭಾಶ್ಚಂದ್ರ ಶೆಟ್ಟಿ ಸೌಕೂರು,ಉಪಾಧ್ಯಕ್ಷರಾಗಿ ಸುಧೀರ್ ಶೆಟ್ಟಿ ಕೆಂಚನೂರು,ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಹಿಲಿಯಾಣ,ಜೊತೆ ಕಾರ್ಯದರ್ಶಿಯಾಗಿ ಕೆ.ಸೂರ್ಯಕಾಂತ ಮತ್ತು ಕೋಶಾಧಿಕಾರಿಯಾಗಿ ನವೀನ್ ಕುಮಾರ್ ಹೆಗ್ಡೆ ಶಾನಾಡಿ ಆಯ್ಕೆಯಾದರು.ಕ್ರೀಡಾ […]

ಆಲೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ

ಕುಂದಾಪುರ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಉಡುಪಿ ಅದರ ಆಲೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆಲೂರು ಮೂಕಾಂಬಿಕಾ ಸಭಾಭವನದಲ್ಲಿ ಸೋಮವಾರ ನಡೆಯಿತು.ಸಂಘದ ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳು,ಅಥಿತಿಗಳು,ಸಮಾಜ ಬಾಂಧವರು ಉಪಸ್ಥಿತರಿದ್ದರು.

You cannot copy content of this page