ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯಲ್ಲಿ ಪಾಲಕರ ಸಭೆ

ಕುಂದಾಪುರ:ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪರಿಶೀಲಿಸಲು 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಪಾಲಕರ ಸಭೆ ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯಲ್ಲಿ ನಡೆಯಿತು.ಮಕ್ಕಳ ಪಾಲಕರು ಸಂಕಲನಾತ್ಮಕ ಪರೀಕ್ಷೆ-1 ರ ಉತ್ತರ ಪತ್ರಿಕೆಗಳನ್ನು ನೋಡಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿದರು.ಮಕ್ಕಳ ಸುರಕ್ಷೆ,ವಿದ್ಯಾರ್ಥಿಗಳಿಗೆ ಹೊರಸಂಚಾರ ಇತ್ಯಾದಿ ವಿಷಯಗಳ ಕುರಿತು ಮುಖ್ಯ ಶಿಕ್ಷಕರು ಮಕ್ಕಳ ಪಾಲಕರಿಗೆ ತಿಳಿಸಿದರು.ಈ ಸಂದರ್ಭ ಶಾಲೆಯ ಶಿಕ್ಷಕವೃಂದವರು,ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ,ಸದ್ಭಾವನಾ ಲಹರಿ-2024 ಕಾರ್ಯಕ್ರಮ ಉದ್ಘಾಟನೆ

ಬೈಂದೂರು:ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಮತ್ತು ಮಹಿಳಾ ವೇದಿಕೆ ವತಿಯಿಂದ,ಉಪ್ಪುಂದ ವಲಯದ ಸಹಕಾರದೊಂದಿಗೆ ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ ಸದ್ಭಾವನಾ ಲಹರಿ-2024 ಸಂತಸ, ಸಡಗರ,ಸನ್ಮಾನ, ಸ್ಪರ್ಧೆಗಳ ಹಬ್ಬ ಕಾರ್ಯಕ್ರಮ, ಆರೋಗ್ಯ ಶಿಬಿರ ಕಾರ್ಯಕ್ರಮ ನಾಗೂರು ಒಡೆಯರಮಠ ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ಭಾನುವಾರ ನಡೆಯಿತು.ದ್ರಾವಿಡ ಬ್ರಾಹ್ಮಣ ಪರಿಷತ್ತು ಮತ್ತು ಮಹಿಳಾಇ ಸಮಾವೇಶದಲ್ಲಿ ಬಾಲ್ಯ ಪೌಂಡೇಶನ್ ಸಹಕಾರದಲ್ಲಿ ದಾಮೋದರ ಶಾಸ್ತ್ರಿ ಅವರು ಫಲಾನುಭವಿಗಳಿಗೆ ಸಹಾಯ ಹಸ್ತ ವಿತರಿಸಿದರು.ಯಾರ್ಂಕ್ ಪಡೆದ ವಿದ್ಯಾರ್ಥಿಗಳಾದ ಶ್ರೀ ಲಕ್ಷ್ಮೀ ಮರವಂತೆ,ಶ್ರೀ ಲಕ್ಷ್ಮೀ […]

ಮುಳ್ಳಿಕಟ್ಟೆಯಲ್ಲಿ ಜಯಮಾಹಲ ವಾಣಿಜ್ಯ ಸಂಕೀರ್ಣ ಶೀಘೃದಲ್ಲೆ ಶುಭಾರಭ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಹೊಸಾಡು ಶಾಲೆ ಸಮೀಪ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಯಶೋಧ ಜಗದೀಶ್ ಮೊಗವೀರ ಬಟ್ಟೆಕುದ್ರು ಅವರ ಮಾಲೀಕತ್ವದ ಜಯಮಾಹಲ ಕಛೇರಿ ಉದ್ಘಾಟನಾ ಕಾರ್ಯಕ್ರಮ ವಿಜಯದಶಮಿ ಶುಭ ಸಂದರ್ಭದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶನಿವಾರ ಮಾಡಲಾಯಿತು.ಈ ಸಂದರ್ಭದಲ್ಲಿ ಜಯಮಾಲ ವಾಣಿಜ್ಯ ಸಂಕೀರ್ಣದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.ಉದ್ಯಮ ಕ್ಷೇತ್ರದಲ್ಲಿ ಸುಮಾರು 38 ವರ್ಷಗಳ ಅನುಭವವನ್ನು ಹೊಂದಿರುವ ಯಶೋಧ ಜಗದೀಶ್ ಮೊಗವೀರ ಅವರು ತಮ್ಮ ಕಷ್ಟದ ದಿನಗಳ ನಡುವೆ ಬೆಂಗಳೂರಿಗೆ ಪಯಣಿಸಿ ಅಲ್ಲಿ ಜೀವನವನ್ನು ಕಟ್ಟಿಕೊಂಡು […]

You cannot copy content of this page