ಹವ್ಯಾಸಿ ಯಕ್ಷಗಾನ ಕಲಾವಿದ ರವೀಂದ್ರ ಆಚಾರ್ಯ ನಿಧನ
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಾಜಿಮಕ್ಕಿ ನಿವಾಸಿಯಾಗಿರುವ ಹವ್ಯಾಸಿ ಯಕ್ಷಗಾನ ಕಲಾವಿದ ಯಕ್ಷ ಪೋಷಕ,ಖ್ಯಾತ ದಾರು ಶಿಲ್ಪಿ ರವೀಂದ್ರ ಆಚಾರ್ಯ ಮುಳ್ಳಿಕಟ್ಟೆ (57) ಅವರು ತೀವೃ ತರಹದ ಹೃದಯಘಾತದಿಂದ ಶುಕ್ರವಾರ ನಿಧನರಾದರು.ಅಂಬಾದೇವಿ ಯಕ್ಷಗಾನ ಕಲಾಸಂಘ ಗಾಣದಮಕ್ಕಿ ಅದರ ಸಕ್ರೀಯ ಕಲಾವಿದರಾಗಿರುವ ರವೀಂದ್ರ ಆಚಾರ್ಯ ಅವರು ಹಲವಾರು ಪ್ರಸಂಗಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.ಯಕ್ಷಗಾನ ಪ್ರದರ್ಶನವನ್ನು ನಿರಂತರವಾಗಿ ಸಂಘಟಿಸುತ್ತಾ ಬಂದಿರುವ ಅವರು ಬಡಗು ಮತ್ತು ತೆಂಕು ತಿಟ್ಟಿನ ಮೇಳದಲ್ಲಿ ತಮ್ಮದೆ ರೀತಿಯ ಸ್ನೇಹ ಬಳಗವನ್ನು ಹೊಂದಿದ್ದರು.ವಿಶ್ವಕರ್ಮ ಸಹಕಾರಿ ಸಂಘದ […]



























































































































































































































































































































































































































































































































































































































































































































































































































































































































































































































































































































































































































































































































































































































































































