ಹವ್ಯಾಸಿ ಯಕ್ಷಗಾನ ಕಲಾವಿದ ಲೇಖಕ ಯೋಗೀಂದ್ರ ಮರವಂತೆಗೆ ಸನ್ಮಾನ

ಕುಂದಾಪುರ:ಯಕ್ಷದ್ರುವ ಪಟ್ಲ ಫೌಂಡೇಷನ್ ವತಿಯಿಂದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಲಂಡನ್ ಮತ್ತು ಬರ್ಮಿಂಗ್ಹ್ಯಾಮ್‍ನಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಅಭಿಯಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಯುಕೆ ಸಂಘಟನೆಯ ಪ್ರತಿನಿಧಿ ಹವ್ಯಾಸಿ ಯಕ್ಷಗಾನ ಕಲಾವಿದ ಲೇಖಕ ಯೋಗೀಂದ್ರ ಮರವಂತೆ ಅವರನ್ನು ಭಾಗವತ ಪಟ್ಲ ಸತೀಶ ಶೆಟ್ಟಿ ಗೌರವಿಸಿದರು.

ಯೋಗಾಚಾರ್ಯ ಸಂತೋಷಗೆ ವಿಶ್ವಮಾನ್ಯ ಯೋಗರತ್ನ ಪ್ರಶಸ್ತಿ

ಕುಂದಾಪುರ:ದೇಶ ವಿದೇಶಗಳಲ್ಲಿ ಯೋಗದ ಕಂಪನ್ನು ಬೀರಿ ಜನಜನಿತರಾಗಿರುವ ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೊಳುರು ನಿವಾಸಿ ಯೋಗಾಚಾರ್ಯ ಸಂತೋಷ್ ಗೂರೂಜಿ ಅವರು ಯೋಗಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಫೌಂಡೇಷನ್ ವತಿಯಿಂದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ವಿಶ್ವಮಾನ್ಯ ಯೋಗರತ್ನ ಪ್ರಶಸ್ತಿ-2023 ನೀಡಿ ಗೌರವಿಸಲಾಯಿತು.

ಕರಾಟೆ ತರಗತಿ ಉದ್ಘಾಟನೆ

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2 ಬಗ್ವಾಡಿ ಯಲ್ಲಿ ಕರಾಟೆ ತರಗತಿ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಜಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿದಸಿದ್ದರು.ಸಂದೀಪ್ ಕುಂದಾಪುರ ಉದ್ಘಾಟಿಸಿದರು. ಕರಾಟೆ ಗುರುಗಳಾದ ನಟರಾಜ್,ಶಿಕ್ಷಕವೃಂದವರು ಉಪಸ್ಥಿತರಿದ್ದರು.ಶಿಕ್ಷಕಿ ಸತ್ಯವತಿ ಸ್ವಾಗತಿಸಿದರು.ಜಯಂತಿ ನಿರೂಪಿಸಿದರು.ಶ್ವೇತಾ ಮತ್ತು ಹರ್ಷಿತ ಸಹಕರಿಸಿದರು.ಸ್ವಾತಿ ವಂದಿಸಿದರು.

You cannot copy content of this page