ಮುಳ್ಳಿಕಟ್ಟೆಯಲ್ಲಿ ಜಯಮಾಹಲ ವಾಣಿಜ್ಯ ಸಂಕೀರ್ಣ ಶೀಘೃದಲ್ಲೆ ಶುಭಾರಭ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಹೊಸಾಡು ಶಾಲೆ ಸಮೀಪ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಯಶೋಧ ಜಗದೀಶ್ ಮೊಗವೀರ ಬಟ್ಟೆಕುದ್ರು ಅವರ ಮಾಲೀಕತ್ವದ ಜಯಮಾಹಲ ಕಛೇರಿ ಉದ್ಘಾಟನಾ ಕಾರ್ಯಕ್ರಮ ವಿಜಯದಶಮಿ ಶುಭ ಸಂದರ್ಭದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶನಿವಾರ ಮಾಡಲಾಯಿತು.ಈ ಸಂದರ್ಭದಲ್ಲಿ ಜಯಮಾಲ ವಾಣಿಜ್ಯ ಸಂಕೀರ್ಣದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.ಉದ್ಯಮ ಕ್ಷೇತ್ರದಲ್ಲಿ ಸುಮಾರು 38 ವರ್ಷಗಳ ಅನುಭವವನ್ನು ಹೊಂದಿರುವ ಯಶೋಧ ಜಗದೀಶ್ ಮೊಗವೀರ ಅವರು ತಮ್ಮ ಕಷ್ಟದ ದಿನಗಳ ನಡುವೆ ಬೆಂಗಳೂರಿಗೆ ಪಯಣಿಸಿ ಅಲ್ಲಿ ಜೀವನವನ್ನು ಕಟ್ಟಿಕೊಂಡು […]

ಕೆಂದಾವರೆ ಚಲನಚಿತ್ರ,ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಕುಂದಾಪುರ:ವಿನೋದ್ ಕುಮಾರ್.ಪಿ ಅವರ ಪರಿಕಲ್ಪನೆಯಡಿ ಮೂಡಿ ಬಂದಿರುವ ಜ್ಯೋತಿ ಜೀವನ್ ಸ್ವರೂಪ್ (ಶಯದೇವಿಸುತೆ) ಮರವಂತೆ ಅವರ ಹೊಸ ಮಹಾ ಕಾದಂಬರಿ ಕೆಂದಾವರೆ ಕನ್ನಡ ಚಲನಚಿತ್ರಕ್ಕೆ ಆಯ್ಕೆಯಾಗಿದೆ.ಅಪ್ರಮೇಯ ಫಿಲಂಸ್ ಅವರ ಪ್ರೊಡಕ್ಷನ್ ನಲ್ಲಿ ಕೆಂದಾವರೆ ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ.ಕನ್ನಡ ಚಿತ್ರರಂಗದ ಶ್ರೇಷ್ಠ ನಟ ಪುನೀತ್‍ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಕೆಂದಾವರೆ ಚಲನಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಬಡಾಕೆರೆ:ರೈಲು ಡಿಕ್ಕಿ ಹೊಡೆದು ಚಿರತೆ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಬಡಾಕೆರೆ ಸಮೀಪ ಸೌಪರ್ಣಿಕಾ ನದಿ ಮೇಲೆ ಹಾದು ಹೋಗಿರುವ ಕೊಂಕಣ ರೈಲು ಬ್ರಿಡ್ಜ್ ಮೇಲೆ ಅಂದಾಜು ಐದು ವರ್ಷ ಪ್ರಾಯವನ್ನು ಹೊಂದಿರುವ ಬೃಹತ್ ಗಾತ್ರದ ಗಂಡು ಚಿರತೆಯೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.ಬೆಳಗಿನ ಜಾವ 4.40 ರ ಸುಮಾರಿಗೆ ಇವೊಂದು ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ.ಉಪ ವಲಯ ಅರಣ್ಯಾಧಿಕಾರಿಗಳಾದ ಪೂರ್ಣಚಂದ್ರ ಮತ್ತು ಸೆಲ್ವ ಮುರುಗನ್,ಅರಣ್ಯ ವೀಕ್ಷಕ ಸುರೇಶ್,ಗಸ್ತು ಅರಣ್ಯ ಪಾಲಕರಾದ ಮಂಜುನಾಥ ನಾಯಕ್ ಮತ್ತು ರಮೇಶ್ ಹಾಗೂ ನಾಡ […]

You cannot copy content of this page