ಸಂಪರ್ಕ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಂಡ ಮೀನುಗಾರರು,ಸರ್ಕಾರದ ನಿರುತ್ಸಾಹ ಧೋರಣೆ

ಕುಂದಾಪುರ:ಬಿಪರ್ ಜಾಯ್ ಚಂಡಮಾರುತದ ಪ್ರಭಾವದಿಂದ ಕಡಲಬ್ಬರ ಉಂಟಾಗಿ ಬೈಂದೂರು ತಾಲೂಕಿನ ಮರವಂತೆ ಕರಾವಳಿ ಭಾಗದ ಫಿಶರೀಷ್ ರಸ್ತೆ ಬಿರುಕು ಬಿಟ್ಟು ಸಂಪರ್ಕ ಕಡಿತವಾಗಿದ್ದರೂ ಸರಕಾರ ಮತ್ತು ಜನಪ್ರತಿನಿಧಿಗಳು,ಇಲಾಖಾಧಿಕಾರಿಗಳು ಯಾವುದೇ ರೀತಿ ಕ್ರಮಗಳನ್ನು ಕೈಗೊಳ್ಳದೆ ಇದ್ದಿದ್ದರಿಂದ ಬೇಸತ್ತ ಮೀನುಗಾರರು ರಸ್ತೆ ಸಂಪರ್ಕ ವ್ಯವಸ್ಥೆಗಾಗಿ ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ವತಿಯಿಂದ ಸುಮಾರು 10.ಲಕ್ಷ.ರೂ ವ್ಯಯಿಸಿ ಕಡಲ ದಂಡೆಗೆ ಕಲ್ಲುಗಳನ್ನು ಹಾಕಿ ಸುಮಾರು 100.ಮೀಟರ್ ವರೆಗಿನ ಸಂಪರ್ಕ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಂಡಿದ್ದಾರೆ. ಮರವಂತೆ ಕಡಲ ತಡಿಯ […]

ವಿದ್ಯಾರ್ಥಿಗಳಿಗೆ ಶಬ್ದಕೋಶ ಪುಸ್ತಕ ವಿತರಣೆ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯ 6,7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಿವೃತ್ತ ಅಧ್ಯಾಪಕರಾದ ಸಂಪತ್ ಕುಮಾರ್ ಪಾಂಗಾಳ ಅವರು ಅತ್ಯುತ್ತಮ ಗುಣಮಟ್ಟದ ಶಬ್ದಕೋಶ ಪುಸ್ತಕವನ್ನು ಉಚಿತವಾಗಿ ನೀಡಿ ಶುಭಹಾರೈಸಿದರು.ದೈಹಿಕ ಶಿಕ್ಷಣ ಪರಿವಿಕ್ಷಣಾಕಾರಿ ಚಂದ್ರಶೇಖರ ಶೆಟ್ಟಿ,ಮುಖ್ಯೋಪಾಧ್ಯಾಯರಾದ ರಾಜೇಶ್,ಶಿಕ್ಷಕವೃಂದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಪಕ್ಷ ಅಪಪ್ರಚಾರ,ಸುಳ್ಳು ಭರವಸೆಯಿಂದ ಅಧಿಕಾರಕ್ಕೆ ಬಂದಿದೆ-ಸಂಸದ ರಾಘವೇಂದ್ರ

ಕುಂದಾಪುರ:ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ 9 ವರ್ಷ ಪೂರೈಸಿದೆ.ಪ್ರಧಾನಿ ಹಾಗೂ ಹಿಂದಿನ ನಮ್ಮ ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಾಗಿದೆ.ಕಾಂಗ್ರೆಸ್ಸಿನ ಅಪಪ್ರಚಾರ,ಸುಳ್ಳು ಭರವಸೆಯಿಂದ ಅಧಿಕಾರಕ್ಕೆ ಬಂದಿರಬಹುದು.ಗ್ಯಾರಂಟಿಗಳನ್ನು ಜಾರಿಗೆ ತರಲು ನಾವು ಹಕ್ಕೊತ್ತಾಯ ಮಾಡುತ್ತೇವೆ.ಖಾಸಗಿ ಬಸ್‍ಗಳಿಗೂ ಸಬ್ಸಿಡಿ ನೀಡುವ ಮೂಲಕ ಅದರಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು.ಇದಕ್ಕಾಗಿ ರಾಜ್ಯವ್ಯಾಪಿ ಬಿಜೆಪಿಯಿಂದ ಜನಾಂದೋಲನ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಹೆಮ್ಮಾಡಿಯ ಜಯಶ್ರೀ ಹಾಲ್‍ನಲ್ಲಿ ಶುಕ್ರವಾರ ನಡೆದ ಬಿಜೆಪಿ ಹಿರಿಯ ಕಾರ್ಯಕರ್ತರ […]

You cannot copy content of this page