ಶ್ರೀಶಾರದಾ ಸದ್ವಿದ್ಯಾ ಆಷಾಢ ವೇದ ಶಿಬಿರ:ಜೂ.30 ರಿಂದ ಆರಂಭ

ಕುಂದಾಪುರ:ಬಡಾಕೆರೆ ಶ್ರೀಮತಿ ಶಾಂತ ಮತ್ತು ಮಾಧವ ಅಡಿಗ ಅವರ ಆಶಯದಂತೆ,ವೇ.ಮೂ ಲೋಕೇಶ ಅಡಿಗ ನಾಗಪಾತ್ರಿಗಳು ಮತ್ತು ಪ್ರಾಂತೀಯ ಧರ್ಮಾಧಿಕಾರಿ ಶ್ರೀ ಶಾರದಾಪೀಠಂ ಶೃಂಗೇರಿ ಅವರ ನೇತೃತ್ವದಲ್ಲಿಧಾರ್ಮಿಕ ಮಂದಿರ ನಾವುಂದ ಬಡಾಕೆರೆಯಲ್ಲಿ ಶ್ರೀ ಶಾರದಾ ಸದ್ವಿದ್ಯಾ ಆಷಾಢ ವೇದ ಶಿಬಿರ ಜೂ.30 ರಿಂದ ಆರಂಭಗೊಂಡು 21 ದಿನಗಳ ಕಾಲ ನಡೆಯಲಿದೆ.ಆಷಾಢ ವೇದ ಶಿಬಿರಕ್ಕೆ ಆಸಕ್ತ ಬ್ರಾಹ್ಮಣ ಸಮಾಜ ಬಾಂಧವ ವಯಸ್ಕರು ಭಾಗವಹಿಸಬಹುದು.ಶಿಬಿರಕ್ಕೆ ಬರಲು ಇಚ್ಛಿಸುವವರು ಸಸ್ವರ ವೇದ ಪುಸ್ತಕ ತರುವುದು ಕಡ್ಡಾಯ.

ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಕುಂದಾಪುರ:ಗಂಗೊಳ್ಳಿ ಪೊಲೀಸ್ ಠಾಣೆ,ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮ ಎಸ್.ವಿ ಪದವಿ ಪೂರ್ವ ಕಾಲೇಜು ಗಂಗೊಳ್ಳಿಯಲ್ಲಿ ಬುಧವಾರ ನಡೆಯಿತು.ಗಂಗೊಳ್ಳಿ ಪೊಲೀಸ್ ಠಾಣೆ,ಪಿಎಸ್‍ಐ ಹರೀಶ್ ಆರ್ ನಾಯ್ಕ್ ಮಾದಕ ದ್ರವ್ಯದಿಂದಾಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು.ಕಿಶೋರ ಅವರು ಕಾರ್ಮಿಕ ಕಾಯ್ದೆ,ಪೋಕ್ಸೋ,ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾಹಿತಿಯನ್ನು ನೀಡಿದರು.ಎಸ್.ವಿ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಪ್ರಿನ್ಸಿಪಾಲ್ ಕವಿತಾ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

90 ಬಿಡಿ ಮನೀಗ್ ನಡಿ ಚಿತ್ರ ಬಿಡುಗಡೆ

ಬೆಂಗಳೂರು:ಅಮ್ಮ ಟಾಕೀಸ್ ಬಾಗಲಕೋಟೆ ರತ್ನಮಾಲಾ ಬಾದರದಿನ್ನಿ ಚಿತ್ರ ತಂಡದವರು ನಿರ್ಮಿಸುತ್ತಿರುವ,ಕುಂದಾಪುರ ಮೂಲದ ಪತ್ರಕರ್ತ ನಾಗರಾಜ್ ಅರೆಹೊಳೆ ನಿರ್ದೇಶನದ ಹಾಸ್ಯ ನಟ ಬಿರಾದಾರ್ ಅಭಿನಯಿಸಿರುವ 90 ಬಿಡಿ ಮನೀಗ್ ನಡಿ ಚಿತ್ರ ಜೂ.29 ರ ಗುರುವಾರದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

You cannot copy content of this page