ಆಲೂರಿನಲ್ಲಿ ಗದ್ದೆ ನಟ್ಟಿ ಕಾರ್ಯ ಆರಂಭ

ಕುಂದಾಪುರ:ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಕುಂದಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಕಾಥಿ ನಟ್ಟಿ ಕಾರ್ಯ ಆರಂಭವಾಗಿದೆ,ಕೃಷಿಕರು ಉತ್ಸಾಹದಿಂದ ಕೃಷಿ ಚಟುವಟಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.ಯಂತ್ರಶೀ ಬೇಸಾಯಕ್ಕೆ ಹೆಚ್ಚಿನ ರೈತರು ಒತ್ತನ್ನು ನೀಡಿದರೆ,ಕೆಲ ಒಂದಿಷ್ಟು ಭಾಗದಲ್ಲಿ ಸಾಲು ನಟ್ಟಿ ಬೇಸಾಯದ ಕ್ರಮವನ್ನು ರೈತರು ಅಳವಡಿಕೆ ಮಾಡಿಕೊಂಡಿದ್ದಾರೆ.ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಹಿನ್ನೆಲೆಯಲ್ಲಿ ಜವಳು ಪ್ರದೇಶ ಹೊರತು ಪಡಿಸಿ ಒಣ ಭೂಮಿ ಪ್ರದೇಶಗಳಲ್ಲಿ ಇನ್ನೂ ಕೂಡ ಕೃಷಿ ಚಟುವಟಿಕೆ ಕಾರ್ಯ ಆರಂಭಗೊಂಡಿಲ್ಲ.

ಗಂಗೊಳ್ಳಿ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

ಕುಂದಾಪುರ:ಸೇವಾ ಕಾರ್ಯಗಳ ಮೂಲಕ ರೊಟರಿ ಕ್ಲಬ್ ಗಂಗೊಳ್ಳಿ ಉತ್ತಮವಾದ ಕೆಲಸಗಳನ್ನು ಮಾಡುತ್ತಿದೆ ಎಂದು ರೋಟರಿ ಜಿಲ್ಲೆ 3182 ವಲಯ 1ರ ಅಸಿಸ್ಟೆಂಟ್ ಗವರ್ನರ್ ಡಾ.ಸಂದೀಪ ಶೆಟ್ಟಿ ಹೇಳಿದರು.ಗಂಗೊಳ್ಳಿ ಸ.ವಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಗಂಗೊಳ್ಳಿ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.ಗಂಗೊಳ್ಳಿ ರೋಟರಿ ಕ್ಲಬ್‍ನ ನೂತನ ಅಧ್ಯಕ್ಷ ಎಂ.ನಾಗೇಂದ್ರ ಪೈ ಅವರಿಗೆ ನಿರ್ಗಮಿತ ಅಧ್ಯಕ್ಷೆ ಸುಗುಣ ಆರ್.ಕೆ. ಮತ್ತು ನೂತನ ಕಾರ್ಯದರ್ಶಿ ಕೃಷ್ಣ ಪೂಜಾರಿ ಅವರಿಗೆ ನಿರ್ಗಮಿತ ಕಾರ್ಯದರ್ಶಿ ಚಂದ್ರಕಲಾ […]

ಡಾ.ಜೈಮಿನಿ ಪ್ರಶಾಂತ್ ಶೆಟ್ಟಿಗೆ ಸನ್ಮಾನ

ಕುಂದಾಪುರ:ರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ನಾವುಂದ ವತಿಯಿಂದ ಡಾ.ಜೈಮಿನಿ ಪ್ರಶಾಂತ್ ಶೆಟ್ಟಿ ಮತ್ತು ದಂಪತಿಗಳನ್ನು ಸನ್ಮಾನಿಸಿ ಶುಭಹಾರೈಸಲಾಯಿತು.ಲಯನ್ಸ್ ಕ್ಲಬ್ ನಾವುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ,ಮಾಜಿ ವಲಯಾಧ್ಯಕ್ಷ ನರಸಿಂಹ ದೇವಾಡಿಗ,ಕಾರ್ಯದರ್ಶಿ ಅಶೋಕ್ ಆಚಾರ್ಯ,ದಿನೇಶ್ ಆಚಾರ್ಯ,ಸಮರ ಶೆಟ್ಟಿ,ರಾಜು.ಬಿ ದೇವಾಡಿಗ,ಶಮ್ಯ ಶೆಟ್ಟಿ ಉಪಸ್ಥಿತರಿದ್ದರು.

You cannot copy content of this page