ಪ್ರತಿಕೋದ್ಯಮ‌ ವಿಭಾಗ ಮುಖ್ಯಸ್ಥ ಭಾಸ್ಕರ್ ಹೆಗ್ಡೆ ಪತ್ನಿ ಹೃದಯಾಘಾತದಿಂದ ಸಾವು

ಮಂಗಳೂರು:ಉಜಿರೆ ಎಸ್.ಡಿ.ಎಂ. ಕಾಲೇಜು ಪತ್ರಿಕೋಧ್ಯಮ ವಿ‌ಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ್ ಹೆಗ್ಡೆ ಅವರ ಪತ್ನಿ ಸುವರ್ಣಾ ಹೆಗ್ಡೆ (49) ಹೃದಯಾಘಾತದಿಂದ ಉಜಿರೆ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.ಮೂಲತಃ ಹೊನ್ನಾವರದ ನಿವಾಸಿ ಆದ ಅವರು ಪ್ರಸ್ತುತ ಉಜಿರೆ ಉಂಡ್ಯಾಪು ನಗರದಲ್ಲಿ ನೆಲೆಸಿದ್ದರು.ಸುವರ್ಣಾ ಹೆಗ್ಡೆ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದು,ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.ಅದಾಗಲೆ ಅವರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವೈದ್ಯರು ಖಚಿತ ಪಡಿಸಿದ್ದರು.ಪತಿ ಸಹಿತ ,ಶಶಾಂಕ್ ಹೆಗ್ಡೆ ಹಾಗೂ ತಂದೆ, ತಾಯಿ,ಓರ್ವ ಸಹೋದರ, ಓರ್ವ ಸಹೋದರಿ ಶಿಕ್ಷಕಿ ಕಾಂಚನಾ ಭಟ್ […]

ಪುತ್ತಿಗೆ ಶ್ರೀ ಆಶೀರ್ವಚನ ನೀಡು ಸಂದರ್ಭ ವಾನರ ಪ್ರತ್ಯಕ್ಷ

ಉಡುಪಿ:ಪರ್ಯಾಯ ಸಂಚಾರ ಪ್ರಯುಕ್ತ ಭುವನೇಶ್ವರ ಪ್ರವಾಸದಲ್ಲಿರುವ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಸುಶೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತಾ ಲೇಖನಾ ಯಜ್ಞಕ್ಕೆ ದೀಕ್ಷೆ ನೀಡುತ್ತಿರುವ ಸಂದರ್ಭ ವಾನರ ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿದ ಘಟನೆ ಪುತ್ತಿಗೆ ಮಠದಲ್ಲಿ ನಡೆದಿದೆ.ವಾನರ ಕೊರಳಿಗೆ ಹೂ ಮಾಲೆ ಅರ್ಪಿಸಿದ ಶ್ರೀಪಾದರು ಬಾಳೆಹಣ್ಣನ್ನು ನೀಡಿದ್ದಾರೆ.ಕೆಲವು ಹೊತ್ತುಗಳ ಕಾಲ ಶ್ರೀಪಾದರ ಬಳಿ ಕುಶಲೋಪರಿಯಲ್ಲಿ ತೊಡಗಿಕೊಂಡ ವಾನರ ವಾಪಾಸ್ಸಾಗಿದೆ.

ವಂಡ್ಸೆ ಎಸ್ಎಲ್ಆರ್ ಎಂ ಘಟಕದಲ್ಲಿ ಗಬ್ಬು ನಾರುತ್ತಿದೆ ಕಸ:ವಿಲೇವಾರಿಗೆ ಆಗ್ರಹ

ಕುಂದಾಪುರ:ವಂಡ್ಸೆ ಗ್ರಾಮ ಪಂಚಾಯತಿಯ ಹಳೆ ಎಸ್ಎಲ್ಆರ್ ಎಂ ಘಟಕದಲ್ಲಿರುವ ಕಸ ವಿಲೇವಾರಿ ಮಾಡದೆ ಇರುವುದರಿಂದ ಮಳೆಯಲ್ಲಿ ಕೊಳೆತು ಗಬ್ಬು ನಾರುತ್ತಿದೆ ಪರಿಸರದಲ್ಲಿರುವ ಶಾಲಾ ಮಕ್ಕಳಿಗೆ ತೊಂದರೆ ಆಗಿದ್ದು,ಕಸವನ್ನು ವಿಲೇವಾರಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕಸವನ್ನು ಸೂಕ್ತವಾದ ರೀತಿಯಲ್ಲಿ ವಿಲೇವಾರಿ ಮಾಡುವ ದೃಷ್ಟಿಯಿಂದ ಎಸ್ಎಲ್ಆರ್ ಎಂ ಘಟಕವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪಿಸಲಾಗಿದೆ.ಸಾರ್ವಜನಿಕರಿಂದ ಉತ್ತಮವಾದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಎಸ್ಎಲ್ಆರ್ ಎಂ ಘಟಕದ ಸ್ಥಾಪನೆ ಸಾರ್ಥಕ ಮನೋಭಾವವನ್ನು ಕಂಡಿದೆ.ವಂಡ್ಸೆ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಶಾಲೆ […]

You cannot copy content of this page