ಡಾ.ಜೈಮಿನಿ ಪ್ರಶಾಂತ್ ಶೆಟ್ಟಿಗೆ ಸನ್ಮಾನ

ಕುಂದಾಪುರ:ರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ನಾವುಂದ ವತಿಯಿಂದ ಡಾ.ಜೈಮಿನಿ ಪ್ರಶಾಂತ್ ಶೆಟ್ಟಿ ಮತ್ತು ದಂಪತಿಗಳನ್ನು ಸನ್ಮಾನಿಸಿ ಶುಭಹಾರೈಸಲಾಯಿತು.ಲಯನ್ಸ್ ಕ್ಲಬ್ ನಾವುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ,ಮಾಜಿ ವಲಯಾಧ್ಯಕ್ಷ ನರಸಿಂಹ ದೇವಾಡಿಗ,ಕಾರ್ಯದರ್ಶಿ ಅಶೋಕ್ ಆಚಾರ್ಯ,ದಿನೇಶ್ ಆಚಾರ್ಯ,ಸಮರ ಶೆಟ್ಟಿ,ರಾಜು.ಬಿ ದೇವಾಡಿಗ,ಶಮ್ಯ ಶೆಟ್ಟಿ ಉಪಸ್ಥಿತರಿದ್ದರು.

ಪರಿಸರದ ಉಳಿವಿಗಾಗಿ ಗಿಡಗಳನ್ನು ನೆಟ್ಟು ಬೆಳೆಸಬೇಕು-ಶಾಸಕ ಕೊಡ್ಗಿ

ಕುಂದಾಪುರ:ಮಂಗಳೂರು ವೃತ್ತ,ಕುಂದಾಪುರ ವಿಭಾಗ,ಶಂಕರನಾರಾಯಣ ವಲಯದ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ ಕೊಡಾಬೈಲ್ ಹೆಂಗವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ನಡೆಯಿತು.ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿಸಸಿನೆಟ್ಟು ಮಾತನಾಡಿ ಪರಿಸರದ ಉಳಿವಿಗಾಗಿ ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ಮಾದಕ ವಸ್ತು ಸೇವನೆಯಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಅಸ್ವಸ್ಥರಾಗುತ್ತಾರೆ

ಕುಂದಾಪುರ:ಕೆ.ಪಿ.ಎಸ್ ಕೋಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು.ಎನ್.ಆರ್.ಆಚಾರ್ಯ ಆಸ್ಪತ್ರೆಯ ಖ್ಯಾತ ಮನೋವೈದ್ಯೆ ಮಹಿಮಾ ಆಚಾರ್ಯ ಮಾತನಾಡಿ, ಮಾದಕ ವಸ್ತು ಸೇವನೆಯಿಂದ ವಿದ್ಯಾರ್ಥಿಗಳು ದೈಹಿಕವಾಗಿ, ಮಾನಸಿಕವಾಗಿ ಅಸ್ವಸ್ತರಾಗುವುದು ಮಾತ್ರವಲ್ಲದೆ ಕುಟುಂಬ,ಸಮಾಜ,ದೇಶಕ್ಕೆ ಮಾರಕರಾಗುತ್ತಾರೆ ಎಂದರು.ಕಾಲೇಜಿನ ಪ್ರಿನ್ಸಿಪಾಲ್ ಸುಶೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಪ್ರವೀಣ್ ಸ್ವಾಗತಿಸಿದರು,ಗಣೇಶ್ ಹೆಬ್ಬಾರ್ ನಿರ್ವಹಿಸಿದರು, ಚಂದ್ರಕಲಾ ವಂದಿಸಿದರು.

You cannot copy content of this page