ಪರಿಸರ ಸಂರಕ್ಷಣೆಗೆ ಎಲ್ಲರೂ ಪಣ ತೊಡಬೇಕು

ಕುಂದಾಪುರ:ಅಭಿವೃದ್ಧಿ ಹೆಸರಿನಲ್ಲಿ ಬೇಕಾಬಿಟ್ಟೆಯಾಗಿ ಮರಗಳನ್ನು ಕಡಿವುದರಿಂದ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಿದೆ ಪರಿಸರ ಸಂರಕ್ಷಣೆಗೆ ಎಲ್ಲರೂ ಪಣ ತೊಡಬೇಕು ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಹೇಳಿದರು.ಗ್ರಾಮ ಪಂಚಾಯತ್ ಗಂಗೊಳ್ಳಿ ವತಿಯಿಂದ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ,ಸದಸ್ಯರಾದ ಬಿ.ಗಣೇಶ ಶೆಣೈ,ಬಿ.ಲಕ್ಷ್ಮೀಕಾಂತ ಮಡಿವಾಳ,ಕೇಶವ ಖಾರ್ವಿ,ಬಿ.ರಾಘವೇಂದ್ರ ಪೈ,ಗ್ರಾಮ ಕರಣಿಕ ಮಾಧವ ಕೊಠಾರಿ,ಪಂಚಾಯತ್ ಸಿಬ್ಬಂದಿಗಳಾದ ನಾರಾಯಣ ಶ್ಯಾನುಭಾಗ್,ಸಂದೀಪ ಖಾರ್ವಿ,ಭಾಗ್ಯ,ಚೈತ್ರಾ, ಕಾರ್ತಿಕ್ ಖಾರ್ವಿ,ರಂಜಿತ್,ಕೃಷ್ಣ ಖಾರ್ವಿ ಉಪಸ್ಥಿತರಿದ್ದರು.

ನಿವೃತ್ತ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿಗೆ ಸನ್ಮಾನ

ಕುಂದಾಪುರ:ಬೈಂದೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಗುರು ಕುಟುಂಬ ಸಮ್ಮಾನ್ ಕಾರ್ಯಕ್ರಮದಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಸರಕಾರಿ ಹಿರಿಯ ಪ್ರಾಥಮಿಕ ಆಲೂರು ಶಾಲೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಶಿಕ್ಷಕರಾದ ಶಶಿಧರ ಶೆಟ್ಟಿ ಮತ್ತು ದಂಪತಿಗಳನ್ನು ಅವರ ನಿವಾಸದಲ್ಲಿ ಸನ್ಮಾನಿಸಿ ಶುಭಹಾರೈಸಲಾಯಿತು.ಬೈಂದೂರು ವಲಯ ಸಂಘದ ಅಧ್ಯಕ್ಷ ಶೇಖರ್,ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ,ಉಪಾಧ್ಯಕ್ಷರಾದ ಸುನಿಲ್ ಶೆಟ್ಟಿ ಮತ್ತು ಗಿರಿಜಾ ಮೊಗವೀರ,ಪದಾಧಿಕಾರಿಗಳಾದ ವಿಜಯ ಶೆಟ್ಟಿ,ರವಿ ಶೆಟ್ಟಿ,ಸುಬ್ರಹ್ಮಣ್ಯ ಡಿ,ಗಣೇಶ್ ಪೂಜಾರಿ,ರಾಘವೇಂದ್ರ ಡಿ,ನಿತ್ಯಾನಂದ,ದೈಹಿಕ ಶಿಕ್ಷಕ […]

ಮಳೆ ಆರ್ಭಟಕ್ಕೆ ಒತ್ತಿನೆಣೆ ಗುಡ್ಡ ಕುಸಿತ,ಹೆದ್ದಾರಿ ಪ್ರಯಾಣಿಕರಿಗೆ ಸಂಕಷ್ಟದ ಭೀತಿ

ಬೈಂದೂರು:ಕಳೆದೆರಡು ದಿನಗಳಿಂದ ಕರಾವಳಿ ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು ನದಿ,ಹಳ್ಳ,ಕೊಳ್ಳ ತುಂಬಿ ಹರಿಯುತ್ತಿದೆ.ಮಳೆಯ ಆರ್ಭಟಕ್ಕೆ ಬೈಂದೂರು ತಾಲೂಕಿನ ಒತ್ತಿನೆಣೆ ಗುಡ್ಡ ಕುಸಿತಗೊಂಡಿದ್ದು,ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಸಂಕಷ್ಟದ ಭೀತಿ ಎದುರಾಗಿದೆ.‌ತಾತ್ಕಾಲಿಕ ಕ್ರಮದ ಭಾಗವಾಗಿ ಗುಡ್ಡದ ಮಗ್ಗುಲಲ್ಲಿ ಹಾದು ಹೋಗಿರುವ ಒಂದು ದಿಕ್ಕಿನ ಸಂಚಾರವನ್ನು ಬಂದ್ ಮಾಡಲಾಗಿದೆ.

You cannot copy content of this page