ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ
ಕುಂದಾಪುರ:ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿದ್ದ ಬಾರಿ ಮಳೆಯಿಂದಸೌಪರ್ಣಿಕಾ ನದಿ ನೀರಿನ ಮಟ್ಟ ಏರಿಕೆ ಆಗಿದ್ದರಿಂದ ನದಿ ಪಾತ್ರ ಪ್ರದೇಶಗಳಲ್ಲಿ ಪ್ರವಾಹ ಕಂಡು ಬಂದಿದೆ. ನೆರೆ ಪೀಡಿತ ಪ್ರದೇಶಗಳಾದ ನಾವುಂದ ,ಸಾಲ್ಬುಡ,ಬಡಾಕೆರೆ, ನಾಡ, ಕಡ್ಕೆ,ಮರವಂತೆ, ಪಡುಕೋಣೆ, ಪ್ರದೇಶಗಳಿಗೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ,ಜಾನುವಾರುಗಳಿಗೆ ಶಾಶ್ವತ ಕೊಟ್ಟಿಗೆ ನಿರ್ಮಾಣ ಹಾಗೂ ಗದ್ದೆ ಪ್ರದೇಶದಲ್ಲಿರುವ ತೋಡುಗಳ ಹೂಳೆತ್ತುವ ಕಾರ್ಯ,ನದಿ ದಂಡೆ ನಿರ್ಮಾಣಕ್ಕೆ ವಿಶೇಷ ಅನುದಾನ ಬಗ್ಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ […]