ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ:ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಪಸಿದ ಮೆಸ್ಕಾಂ ಸಿಬ್ಬಂದಿಗಳು

ಕುಂದಾಪುರ:ಭಾರಿ ಗಾಳಿ ಮಳೆಗೆ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಯಕವಾಡಿ ರವೀಂದ್ರ ಆಚಾರಿ ಮನೆ ಬಳಿ ವಿದ್ಯುತ್ ಲೈನ್ ಮೇಲೆ ಹಲಸಿನ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ತುಂಡಾಗಿದೆ ಹಾಗೂ ಕೊಡಪಾಡಿ ಅಮ್ಮು ಪೂಜಾರಿ ಮನೆ ಬಳಿ ಹಾದು ಹೋಗಿರುವ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಧರೆಗೆ ಉರುಳಿ ಬಿದ್ದಿದೆ.ಮೆಸ್ಕಾಂ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿದರು.ಗಂಗೊಳ್ಳಿ:ಶಾಂತನಕೇರಿ ಎಂಬಲ್ಲಿ ಎರಡು ವಿದ್ಯುತ್ ಕಂಬಗಳು ತುಂಡಾಗಿ ಧರೆಗೆ ಉರುಳಿ ಬಿದ್ದಿದೆ.ಗಂಗೊಳ್ಳಿ […]

ಗದ್ದೆಯಲ್ಲಿ ಸಿಲುಕಿಕೊಂಡ ಪವರ್ ಟಿಲ್ಲರ್

ಕುಂದಾಪುರ:ಹೊಸಾಡು ಗ್ರಾಮದ ವಳನಾಡು ಎಂಬಲ್ಲಿ ಯಶೋಧ ಮೊಗವೀರ ಅವರ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದಾಗ ಜಲ ಜೀವನ್ ಮಿಷನ್ ಪೈಪ್‍ಲೈನ್ ಹೊಂಡದಲ್ಲಿ ಪವರ್ ಟಿಲ್ಲರ್ ಸಿಕ್ಕಿ ಹಾಕಿಕೊಂಡ ಘಟನೆ ಬುಧವಾರ ನಡೆದಿದೆ.ಹರಸಾಹಸ ಪಟ್ಟು ರೈತರು ಪವರ್ ಟಿಲ್ಲರ್‍ನ್ನು ಮೇಲಕ್ಕೆ ಎತ್ತಿದರು.ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಜಲ ಜೀವನ್ ಮಿಷನ್ ಪೈಪ್‍ಲೈನ್ ಹೊಂಡವನ್ನು ಕೃಷಿ ಭೂಮಿ ಮಧ್ಯದಲ್ಲಿ ತೆಗೆದಿದ್ದರಿಂದ ಗದ್ದೆ ಉಳುಮೆ ಮಾಡುತ್ತಿದ್ದಾಗ ಪವರ್ ಟಿಲ್ಲರ್ ಹೊಂಡದಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ರೈತರು ಆರೋಪಿಸಿದ್ದಾರೆ.ಯಂತ್ರದ ಪ್ರಮುಖ […]

ಶಾಸಕ ಕಿರಣ್ ಕುಮಾರ್ ಕೊಡ್ಗಿಗೆ ಅಭಿನಂದನೆ

ಕುಂದಾಪುರ:ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿ ಕುಂದಾಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಕಿರಣ್ ಕುಮಾರ್ ಕೊಡ್ಗಿ ಅವರನ್ನು ಕುಂದಾಪುರ ತಾಲೂಕು ಪರಿಯಾಳ ಸಮಾಜ ಸುಧಾಕರ ಸಂಘದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು.ಕುಂದಾಪುರ ತಾಲೂಕು ಪರಿಯಾಳ ಸಮಾಜದ ಅಧ್ಯಕ್ಷ ಮಂಜುನಾಥ್ ಸಾಲಿಯಾನ್ ತ್ರಾಸಿ,ಗೌರವಾಧ್ಯಕ್ಷ ಸುಜಯ್ ಸುವರ್ಣ ವಕ್ವಾಡಿ,ಕಾರ್ಯದರ್ಶಿ ಪ್ರಸನ್ನ ಸಾಲಿಯಾನ್ ಕುಂದಾಪುರ,ಕೋಶಾಧಿಕಾರಿ ಪೂರ್ಣಚಂದ್ರ ಬಂಗೇರ ಹಂಗ್ಳೂರ್,ಮಹೇಶ್ ಸುವರ್ಣ ಅರಾಟೆ,ಮಂಗಳೂರು ಮಹಾಸಭಾ ಕಾರ್ಯದರ್ಶಿ ಸಂದೀಪ್ ಸಾಲಿಯಾನ್ ಬ್ರಹ್ಮಾವರ,ಹಿರಿಯರಾದ ಗಣಪ ಸುವರ್ಣ,ಭಾಸ್ಕರ್ ಸಾಲಿಯಾನ್,ದಿನೇಶ್ ಸಾಲಿಯಾನ್,ಉದಯ ಸುವರ್ಣ,ಮಹೇಶ್ ಸಾಲಿಯಾನ್,ಸತೀಶ್ ಸುವರ್ಣ,ಮನೋಜ್ ಸುವರ್ಣ,ಹರೀಶ್ ಸುವರ್ಣ ಹಾಗೂ ಮಹಿಳಾ ಅಧ್ಯಕ್ಷೆ […]

You cannot copy content of this page