ಹಣವನ್ನು ಹಿಂತಿರುಗಿಸಿ ಸಾಮಾಜಿಕ ಕಾಳಜಿ ಮೆರೆದ ಧನ್ವಿ ಮರವಂತೆ
ಕುಂದಾಪುರ:ವಿಶ್ವ ಯೋಗ ಪಟು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತೆ ಬಾಲ ಪ್ರತಿಭೆಯಾಧ ಧನ್ವಿ ಮರವಂತೆ ಅವರು ಶುಕ್ರವಾರ ಮನೆಯಿಂದ ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಸಿಕ್ಕಿದ್ದ ಸುಮಾರು 11,500.ರೂ ಅನ್ನು ಪೆÇಲೀಸ್ ಠಾಣೆಗೆ ಹಸ್ತಾಂತರ ಮಾಡಿ ಫಲಾನುಭವಿಗಳಿಗೆ ಮರಳಿಸುವುದರ ಮುಖೇನ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.ಬಾಲಪ್ರತಿಭೆ ಧನ್ವಿ ಮರವಂತೆ ಅವರ ಸಾಮಾಜಿಕ ಕಾಳಜಿಯನ್ನು ಪ್ರಶಂಶಿಸಿದ ಗಂಗೊಳ್ಳಿ ಪೆÇಲೀಸ್ ಠಾಣೆಯ ಪಿ.ಎಸ್.ಐ ವಿನಯ್ ಎಂ ಕೊರ್ಲಹಳ್ಳಿ ಅವರು ಅವಳ ವಿದ್ಯಾರ್ಥಿ ಜೀವನಕ್ಕೆ ಅನುಕೂಲವಾಗುವ ದೃಷ್ಟಿಯಿಂದ 13,000.ರೂ ಮೌಲ್ಯದ ಟೇಬಲ್ ಸಹಿತ […]