ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿದ ಪಿಕಪ್ ವಾಹನ: ಮಹಿಳೆ ಗಂಭೀರ

ಮಂಗಳೂರು:ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮನೆ ಮೇಲೆ ಬಿದ್ದಿದ್ದ ಪರಿಣಾಮ ಮನೆ ಜಖಂಗೊಂಡಿದ್ದು, ಮನೆಯೊಳಗೆ ಮಹಿಳೆ ಸಿಲುಕಿ ಹಾಕಿಕೊಂಡ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಪರಿಯಲ್ಲಡ್ಕ-ಸಾರಡ್ಕ ಕೂರೇಲು ಎಂಬಲ್ಲಿ ನಡೆದಿದೆ.ಕೂರೇಲು ಮಧ್ಯದ ಅಂಗಡಿಯ ಸಮೀಪ ಹಾದು ಹೋಗಿರುವ ರಸ್ತೆಯ ಕೆಳಗಿರುವ ಮನೆಯೊಂದರ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಬಿದ್ದು ಮನೆಗೆ ಸಂಪೂರ್ಣ ಹಾನಿಯಾಗಿದೆ.ಮನೆಯಲ್ಲಿರುವ ಮಹಿಳೆ ಮಲಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ,ಅಪಘಾತದಲ್ಲಿ ಗಾಯಗೊಂಡ ಮಹಿಳೆ ಗಂಭೀರ ಪರಿಸ್ಥಿಯಲಿದ್ದಾರೆ. ವಿಟ್ಲ ಪೊಲೀಸರು,ತುರ್ತು ಸೇವಾ ವಾಹನ […]

ಹಿರಿಯ ಆಟೋ ಚಾಲಕ ಮಹಾಬಲೇಶ್ವರ ಐತಾಳ್ ನಿಧನ

ಕುಂದಾಪುರ:ಹಲವಾರು ವರ್ಷಗಳಿಂದ ಆಟೋ ಚಾಲಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ತ್ರಾಸಿ ಗ್ರಾಮದ ನಿವಾಸಿ ಹಿರಿಯ ಆಟೋ ಚಾಲಕರಾದ ಮಹಾಬಲೇಶ್ವರ ಐತಾಳ್ ಗುರುವಾರ ನಿಧನರಾದರು.

ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿಯೊರ್ವ ಸಾವು

ಮಂಗಳೂರು:ಬೆಳಾಲು ಗ್ರಾಮದ ಮಾಯಾ ಅತ್ರಿಜಾಲು ನಿವಾಸಿ ತಮ್ಮಯ್ಯ ಗೌಡ (43) ಎನ್ನುವ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.ತಮ್ಮಯ್ಯ ಎನ್ನುವರು ಬುಧವಾರ ಬೆಳಿಗ್ಗೆ ನಾಪತ್ತೆಯಾಗಿದ್ದರು ಅವರಿಗಾಗಿ ಎಲ್ಲಾ ಕಡೆ ಹುಡುಕಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.ಕೆರೆಗೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರ ನೇತೃತ್ವದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content of this page