ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್‍ನಲ್ಲಿ ಸ್ಕೈ ಡೈನಿಂಗ್ ಉದ್ಘಾಟನೆ

ಕುಂದಾಪುರ:ವಿಶ್ವ ಪ್ರಸಿದ್ಧ ತ್ರಾಸಿ ಮರವಂತೆ ಬೀಚ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಕೈ ಡೈನಿಂಗ್ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು.ಧಾರ್ಮಿಕ ಪೂಜಾ ಕಾರ್ಯಗಳನ್ನು ಮಾಡಲಾಯಿತು.ಸಮುದ್ರ ಮಟ್ಟದಿಂದ ಸುಮಾರು 90 ರಿಂದ 100 ಮೀಟರ್ ಎತ್ತರದಲ್ಲಿ ಕುಳಿತು ಕಡಲ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ,ರಾಷ್ಟ್ರೀಯ ಹೆದ್ದಾರಿ ನೋಟ,ಸೌಪರ್ಣಿಕಾ ನದಿಯ ಸೌಂದರ್ಯ ನೋಡುತ್ತಾ ನಿಮಿಷ್ಟದ ಖಾದ್ಯವನ್ನು ಸವಿಯಬಹುದು.ಟೀಮ್ ಮಂತ್ರಾಸ್ ಅವರು ಆಯೋಜನೆ ಮಾಡಿರುವ ಸ್ಕೈ ಡೈನಿಂಗ್ ಕರ್ನಾಟಕದ ಎರಡನೇ ತಾಣವಾಗಿದ್ದು ಒಂದು ಬಾರಿ 12 ಜನ ಸ್ಕೈಡೈನಿಂಗ್‍ನಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸ ಬಹುದಾಗಿದೆ .ಬೇರೆ […]

71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮ

ಕುಂದಾಪುರ:ಶ್ರೀ ಗಣೇಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಳ್ಳಿಕಟ್ಟೆ-ಹೊಸಾಡು ಶಾಖೆ ವತಿಯಿಂದ 71ನೇ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮ ದಿ.ಜಿಎಸ್ ಆಚಾರ್ಯ ಸ್ಮಾರಕ ಸಭಾಭವನ ಮುಳ್ಳಿಕಟ್ಟೆಯಲ್ಲಿ ಬುಧವಾರ ನಡೆಯಿತು.ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ ಅವರು ಸಹಕಾರ ಕಾಯಿದೆ,ನಿಯಮಗಳ ಬಗ್ಗೆ ಹಾಗೂ ಸಹಕಾರಿ ಸಪ್ತಾಹ ಆಚರಣೆಯ ಉದ್ದೇಶದ ಕುರಿತು ಮಾಹಿತಿಯನ್ನು ನೀಡಿದರು. ಸಂಘದ ಅಧ್ಯಕ್ಷ ಮುರಳೀಧರ ಐತಾಳ್ ಅಧ್ಯಕ್ಷತೆ ವಹಿಸಿದ್ದರು.ಸಂಘದ ಸಲಹೆಗಾರ ಡಿ.ಎಂ ಕಾರಂತ ಮತ್ತು ಎಲ್ಲಾ ನಿರ್ದೇಶಕರು,ನಿವೃತ್ತ ನೌಕರರ ಸಂಘದ ಅಧ್ಯಕ್ಷ […]

ರವಿ ಖಾರ್ವಿಗೆ ದೇಶದ ಅತ್ಯುತ್ತಮ ಸಮುದ್ರ ಮೀನು ಕೃಷಿಕ ಪ್ರಶಸ್ತಿ

ಕುಂದಾಪುರ:ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ(ಐಸಿಎಆರ್- ಸಿಎಂಎಫ್‍ಆರ್‍ಐ) ಮಂಗಳೂರು ಪ್ರಾದೇಶಿಕ ಕೇಂದ್ರ ಕರ್ನಾಟಕ ದಿಂದ ತರಬೇತಿ ಪಡೆದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ ಪ್ರಗತಿಪರ ಮೀನು ಕೃಷಿಕ ರವಿ ಖಾರ್ವಿ,ಭಾರತ ಸರಕಾರದ ಮೀನುಗಾರಿಕೆ,ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡುವ ಅತ್ಯುತ್ತಮ ಸಮುದ್ರ ಮೀನು ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ನವದೆಹಲಿಯಲ್ಲಿ ಗುರುವಾರ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಮೀನುಗಾರಿಕಾ ಸಚಿವ ರಾಜೀವ್ ರಂಜನ್ ಸಿಂಗ್ ಅವರಿಂದ ರವಿ ಖಾರ್ವಿ ಅವರು ಪ್ರಶಸ್ತಿ ಪತ್ರ ಸಹಿತ […]

You cannot copy content of this page