ಆಸ್ತಿಗಾಗಿ ಸಹೋದರರ ನಡುವೆ ಗಲಾಟೆ:ಅಣ್ಣನ ಸಾವು

ಮಂಗಳೂರು:ಆಸ್ತಿಗಾಗಿ ಸಹೋದರರ ನಡುವೆ ಗಲಾಟೆ ಉಂಟಾಗಿ ತಮ್ಮನೋರ್ವ ಅಣ್ಣನನ್ನೇ ಕೊಲೆಗೈದ ಭೀಕರ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.ಕೊಲೆಯಾದವರನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ.ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಜಾಗಕ್ಕೆ ಹೋಗಿದ್ದ ವೇಳೆ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದು,ಸಿಟ್ಟಿಗೆದ್ದ ತಮ್ಮ ಅಣ್ಣ ಉಸ್ಮಾನ್ ಅವರಿಗೆ ಚೂರಿಯಿಂದ ಚುಚ್ಚಿದ್ದು, ಈ ವೇಳೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗುಜ್ಜಾಡಿ ಗ್ರಾಮ ಪಂಚಾಯತ್‍ನ,ಪ್ರಥಮ ಸುತ್ತಿನ ಗ್ರಾಮಸಭೆ

ಕುಂದಾಪುರ:ಗುಜ್ಜಾಡಿ ಗ್ರಾಮ ಪಂಚಾಯತಿಯ 2023-24ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆಯಿತು.ಗ್ರಾ.ಪಂ ಅಧ್ಯಕ್ಷೆ ಯಮುನಾ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದರು.ಸಹಾಯಕ ಕಾರ್ಯನಿರ್ವಾಹಕ ಇಂಜಿಯರ್ ಬೈಂದೂರು ರಾಜ್‍ಕುಮಾರ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಗ್ರಾಮ ಸಭೆಯನ್ನುದ್ದೆಶೀಸಿ ಮಾತನಾಡಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯ ಬೇಕಾದರೆ ಗ್ರಾಮಸ್ಥರ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಹೇಳಿದರು.ಗ್ರಾಮ ಪಂಚಾಯತ್‍ನಲ್ಲಿ ಕೈ ಗೊಂಡ ವಿವಿಧ ಕಾಮಗಾರಿ,ಜನರ ಬೇಡಿಕೆಗಳನ್ನು ಸಭೆಯಲ್ಲಿ ಓದಿ ಹೇಳಲಾಯಿತು.ವರ್ಷದಲ್ಲಿ ಎರಡು ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವಂತೆ ಸಾರ್ವಜನಿಕರ ಬೇಡಿಕೆ […]

ಚಂದ್ರಯಾನ-3 ಯಶಸ್ವಿ ಉಡಾವಣೆ,ವಿಜ್ಞಾನಿಗಳು ಹರ್ಷ

ಬೆಂಗಳೂರು:ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಮಹಾತ್ವಾಕಾಂಕ್ಷೆಯ ಚಂದ್ರಯಾನ-3 ಗಗನ ನೌಕೆ ಉಡಾವಣೆ ಯಶಸ್ವಿಯಾಗಿದ್ದು ವಿಜ್ಞಾನಿಗಳು ಹರ್ಷಚಿತ್ತರಾಗಿದ್ದಾರೆ.ಕೋಟಿ,ಕೋಟಿ ಭಾರತೀಯರ ಶುಭಹಾರೈಕೆ ಫಲಿಸಿದೆ.ಗಗನ ನೌಕೆಯನ್ನು ಹೊತ್ತ ಎಲ್‍ವಿಎಂ3 ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ನಭಕ್ಕೆ ಶುಕ್ರವಾರ ಮಧ್ಯಾಹ್ನ ಚಿಮ್ಮಿದೆ.ಯೋಜನೆಗೆ ಯಶಸ್ಸು ಕೋರಿ ಇಸ್ರೋ ವಿಜ್ಞಾನಿಗಳು ತಿರುಮಲ ತಿಮ್ಮಪ್ಪ ದೇಗುಲದಲ್ಲಿ ಗುರುವಾರ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ದರು.

You cannot copy content of this page