ಸೌತ್ ಕೆನರಾ ಫೋಟೋಗ್ರಾಫರ್ಸ್,ವಾರ್ಷಿಕ ಕ್ರೀಡಾಕೂಟ
ಕುಂದಾಪುರ:ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ಕುಂದಾಪುರ ಮತ್ತು ಬೈಂದೂರು ವಲಯದ ವಾರ್ಷಿಕ ಕ್ರೀಡಾ ಕೂಟ ಕುಂದಾಪುರ ಗಾಂಧಿ ಮೈದಾನದಲ್ಲಿ ಭಾನುವಾರ ನಡೆಯಿತು. ಉದ್ಯಮಿ ದಿನಕರ್ ನಾಯ್ಕ್ ಬೆಳಂಜೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ,ಕಷ್ಟ ಪಟ್ಟು ದುಡಿದ ಹಣದಲ್ಲಿ ಸ್ವಲ್ಪಂಶವನ್ನು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದೀರಿ.ವೃತೀಯ ಜಂಜಾಟದ ನಡುವೆಯೂ ವರ್ಷಕ್ಕೊಮ್ಮೆ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಸದಸ್ಯರೊಳಗೆ ಸಾಮಾರಸ್ಯ ಮುಡಿಸುವ ಪ್ರಯತ್ನ ಸಂಘಟನೆಯಿಂದ ಆಗುತ್ತಿದೆ ಎಂದರು.ಇದೇ ಸಂಧರ್ಭದಲ್ಲಿ ಇಂಡಿಯನ್ ಪ್ಯಾರಾ ಕ್ರಿಕೆಟ್ ಆಟಗಾರ […]







































































































































































































































































































































































































































































































































































































































































































































































































































































































































































































































































































































































































































































































































































































































































