ಹೆಮ್ಮಾಡಿ ಶಾಲೆಗೆ ಶಿಕ್ಷಣಾಧಿಕಾರಿಗಳು ಭೇಟಿ

ಕುಂದಾಪುರ:ಶಿಥಿಲಾವಸ್ಥೆಯಲ್ಲಿದ್ದ ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯ ಕಟ್ಟಡ ಗಾಳಿ ಮಳೆಗೆ ಧರೆಗುರುಳಿದ ಹಿನ್ನೆಲೆಯಲ್ಲಿ ಶಿಕ್ಷಣ ಸಂಯೋಜಕರಾದ ಯೋಗೀಶ್ ಮತ್ತು ಚಂದ್ರ ದೇವಾಡಿಗ ಹಾಗೂ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜುನಾಥ್ ನಾಯ್ಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಶಾಲೆಯ ಅಧ್ಯಾಪಕರಾದ ದಿವಾಕರ ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ,ಪ್ರತಿಭಟನೆ ಕೈಬಿಟ್ಟ ಪೋಷಕರು

ಕುಂದಾಪುರ:ಕನ್ನಡ ಶಿಕ್ಷಕರನ್ನು ಹೆಚ್ಚುವರಿ ಆಧಾರದ ಮೇಲೆ ವರ್ಗಾವಣೆ ಮಾಡಿರುವುದದನ್ನು ಖಂಡಿಸಿ ಕಳೆದ ಐದು ದಿನಗಳಿಂದ ಬೈಂದೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಪಡುಕೋಣೆ ಶಾಲೆಯಲ್ಲಿ ನಡೆಯುತ್ತಿದ್ದ ಮಕ್ಕಳ ಪೋಷಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪಡುಕೋಣೆ ಶಾಲೆಯಲ್ಲಿ ಬುಧುವಾರ ವಿಶೇಷ ಸಭೆ ನಡೆಯಿತು. ಡಿಡಿಪಿಐ ಗಣಪತಿ.ಕೆ ಪೋಷಕರ ಸಭೆಯನ್ನುದ್ದೇಶಿಸಿ ಮಾತನಾಡಿ ಸರಕಾರದ ನಿಯಮದ ಪ್ರಕಾರ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ,ಪರ್ಯಾಯವಾಗಿ ಅತಿಥಿ ಶಿಕ್ಷಕರೊಬ್ಬರನ್ನು ನೇಮಕ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಹೇಳಿದರು.ಪೋಷಕರ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಕೆ ಮಾಡಲಾಗುವುದೆಂದು […]

ಶ್ರೀಶಾರದಾ ಸದ್ವಿದ್ಯಾ ಆಷಾಢ ವೇದ ಶಿಬಿರ:ಜೂ.30 ರಿಂದ ಆರಂಭ

ಕುಂದಾಪುರ:ಬಡಾಕೆರೆ ಶ್ರೀಮತಿ ಶಾಂತ ಮತ್ತು ಮಾಧವ ಅಡಿಗ ಅವರ ಆಶಯದಂತೆ,ವೇ.ಮೂ ಲೋಕೇಶ ಅಡಿಗ ನಾಗಪಾತ್ರಿಗಳು ಮತ್ತು ಪ್ರಾಂತೀಯ ಧರ್ಮಾಧಿಕಾರಿ ಶ್ರೀ ಶಾರದಾಪೀಠಂ ಶೃಂಗೇರಿ ಅವರ ನೇತೃತ್ವದಲ್ಲಿಧಾರ್ಮಿಕ ಮಂದಿರ ನಾವುಂದ ಬಡಾಕೆರೆಯಲ್ಲಿ ಶ್ರೀ ಶಾರದಾ ಸದ್ವಿದ್ಯಾ ಆಷಾಢ ವೇದ ಶಿಬಿರ ಜೂ.30 ರಿಂದ ಆರಂಭಗೊಂಡು 21 ದಿನಗಳ ಕಾಲ ನಡೆಯಲಿದೆ.ಆಷಾಢ ವೇದ ಶಿಬಿರಕ್ಕೆ ಆಸಕ್ತ ಬ್ರಾಹ್ಮಣ ಸಮಾಜ ಬಾಂಧವ ವಯಸ್ಕರು ಭಾಗವಹಿಸಬಹುದು.ಶಿಬಿರಕ್ಕೆ ಬರಲು ಇಚ್ಛಿಸುವವರು ಸಸ್ವರ ವೇದ ಪುಸ್ತಕ ತರುವುದು ಕಡ್ಡಾಯ.

You cannot copy content of this page