ಅಪಾಯಕ್ಕೆ ಸಿಲುಕಿದ ಕಡಲಾಮೆ ರಕ್ಷಣೆ,ಅರಣ್ಯಾಧಿಕಾರಿಗಳಿಗೆ ಹಸ್ತಾಂತರ
ಕುಂದಾಪುರ:ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚುಗೋಡು ಕಡಲ ತೀರದಲ್ಲಿ ಒದ್ದಾಡುತ್ತಿದ್ದ ಆಲೀವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯನ್ನು ವಿಪತ್ತು ನಿರ್ವಹಣಾ ಘಟಕ ಮೊವಾಡಿ ಹಾಗೂ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದ ತಂಡದ ಸದಸ್ಯರು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಗುರುವಾರ ಹಸ್ತಾಂತರ ಮಾಡಿದ್ದಾರೆ.ಕಡಲಾಮೆಯನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಸಚಿನ್ ಖಾರ್ವಿ,ಜೀವ ರಕ್ಷಕ ತಂಡದ ಸದಸ್ಯರಾದ ದಿನೇಶ್ ಖಾರ್ವಿ,ಶರತ್ ಖಾರ್ವಿ ಹಾಗೂ ಸ್ಥಳೀಯರಾದ ಯೋಗೇಶ್,ಕಾರ್ತಿಕ್,ಆದರ್ಶ್,ರಾಘವೇಂದ್ರ ಪಾಲ್ಗೊಂಡಿದ್ದರು.ಇದೆ ತಂಡ ಬುಧವಾರ ಮರವಂತೆ ಬೀಚ್‍ನಲ್ಲಿ ಅಲೆಯ ಹೊಡೆತಕ್ಕೆ ಸಿಲುಕಿ […]







































































































































































































































































































































































































































































































































































































































































































































































































































































































































































































































































































































































































































































































































































































































































