ನಾಪತ್ತೆ ಆದ ಯುವಕ,ನದಿಯಲ್ಲಿ ಶವವಾಗಿ ಪತ್ತೆ

ಕುಂದಾಪುರ:ಜಡ್ಕಲ್ ಗ್ರಾಮದ ಮೆಕ್ಕೆ ಕೊಳಹೊಳೆ ಎಂಬಲ್ಲಿ ಜು.23 ರ ಭಾನುವಾರ ದಂದು ನಾಪತ್ತೆ ಆಗಿದ್ದ ಸುರೇಶ (28) ಎನ್ನುವ ಯುವಕನ ಮೃತದೇಹ ಶನಿವಾರ ಕಾನ್ಕಿ ಹಾಸ್ಕಲ್ ಪಾರೆಯ ನದಿಯಲ್ಲಿ ಪತ್ತೆ ಆಗಿದೆ.ನಿರಂತರವಾಗಿ ಸುರಿಯುತ್ತಿದ್ದ ಭಾರಿ ಮಳೆಯಲ್ಲಿ ಸುರೇಶ ಬಹಿರ್ದೆಸೆಗೆಂದು ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭ ವಾಪಾಸು ಮನೆಗೆ ಬಾರದೆ ನಾಪತ್ತೆ ಆಗಿದ್ದಾನೆ.ನದಿ,ತೋಡುಗಳು ತುಂಬಿ ಹರಿಯುತ್ತಿದ್ದರಿಂದ ಯುವಕ ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕಿಸಲಾಗಿತ್ತು.ಯುವಕನ ಪತ್ತೆಗಾಗಿ ತೀವೃವಾದ ಕಾರ್ಯಾಚರಣೆಯನ್ನು ಮಾಡಲಾಗಿದೆ.ಕೊಲ್ಲೂರು ಠಾಣೆ ಪಿಎಸ್‍ಐ ಜಯಶ್ರೀ ಹೊನ್ನೂರು ಮತ್ತು ಸುಧಾರಾಣಿ […]

ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ-ಬೆಲೆ ಬಾಳುವ ಶ್ರೀಗಂಧದ ತುಂಡುಗಳು ವಶಕ್ಕೆ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ಕಾರಿಬೈಲು ಎಂಬಲ್ಲಿ ಸುಮಾರು 2.ಲಕ್ಷ.ರೂ ಮೌಲ್ಯದ ಶ್ರೀಗಂಧದ ಮರದ ತಂಡುಗಳನ್ನು ಕ್ಷೀಪ್ರ ಕಾರ್ಯಾಚರಣೆ ಮೂಲಕ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ.ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.ಬೆಳ್ಳಾಲ ಗ್ರಾಮದ ಕಾರಿಬೈಲು ಪರಿಸರದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಅನುಮಾನಾಸ್ಪದ ಪಟ್ಟ ಸ್ಥಳದಲ್ಲಿದ್ದ ಬೆಲೆಬಾಳುವ ಒಂದು ಶ್ರೀಗಂಧದ ಮರವನ್ನು ಆರೋಪಿಗಳು ಕಡಿದು ಸಾಗಾಟ ಮಾಡುವ ಹೊತ್ತಿನಲ್ಲಿ ಖಚಿತ ಮಾಹಿತಿ ಮೇರೆಗೆ ಡಿಸಿಎಫ್ ಉದಯ ಎಂ ನಾಯಕ್ ಅವರ ನಿರ್ದೇಶನದಂತೆ,ಎಸಿಎಫ್ ಕ್ಲಿಫರ್ಡ್ ಲೋಬೋ ಅವರ ಮಾರ್ಗದರ್ಶನದಲ್ಲಿ […]

ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಅಭಿವಿನ್ಯಾಸ,ಅಭಿನಂದನಾ ಕಾರ್ಯಕ್ರಮ

ಕುಂದಾಪುರ:ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ ವತಿಯಿಂದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಹಾಗೂ ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ಕುಂದಾಪುರ ಮೊಗವೀರ ಭವನದಲ್ಲಿ ನಡೆಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ,ಪ್ರಿನ್ಸಿಪಾಲ್ ಗಣೇಶ ಮೊಗವೀರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕುಂದಾಪುರ ಆದರ್ಶ ಆಸ್ಪತ್ರೆ ಎಮ್.ಡಿ ಡಾ.ಆದರ್ಶ ಹೆಬ್ಬಾರ್ ಮಾತನಾಡಿ ಶಿಕ್ಷಣ, ಕ್ರೀಡೆ,ಕಲೆ,ಸಾಹಿತ್ಯದ ಸಂಗಮವೇ ನಿಜವಾದ ಶಿಕ್ಷಣವಾಗಿದೆ.ವಿದ್ಯಾರ್ಥಿಗಳು ಪೂರ್ವ ತಯಾರಿಯೊಂದಿಗೆ ಪರೀಕ್ಷೆಯನ್ನು ಎದುರಿಸಬೇಕೆಂದು ಶುಭ ಹಾರೈಸಿದರು.ಬ್ರಹ್ಮಾವರ ವಿದ್ಯಾಲಕ್ಷ್ಮೀ […]

You cannot copy content of this page