ಮರವಂತೆ ಸಿಆರ್ ಝಡ್ ಕ್ಲಿಯರೆನ್ಸ್ ಗೆ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಸಚಿವರಿಗೆ ಮನವಿ

ಕುಂದಾಪುರ:ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರು ತಾಲೂಕಿನ ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಕೆಲಸಕ್ಕೆ ಈಗಾಗಲೇ 85 ಕೋಟಿ.ರೂ ಮಂಜೂರಾಗಿದ್ದು ಬಂದರಿನ ಕಾಮಗಾರಿ ಕೆಲಸ ಆದಷ್ಟು ಬೇಗ ಆರಂಭಿಸಲು ಸಿಆರ್ ಝಡ್ ಕ್ಲಿಯರೆನ್ಸ್ ನೀಡುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೆಂದ್ರ ಬಂದರು ಮತ್ತು ಮೀನುಗಾರಿಕೆ ಸಚಿವರಾದ ಸರ್ಬಾನಂದ್ ಸೋನುವಾಲ್ ಅವರನ್ನು ದೆಹಲಿಯಲ್ಲಿ ಭೇಟಿಮಾಡಿ ಮನವಿಯನ್ನು ಮಾಡಿದ್ದಾರೆ. ಇತ್ತೀಚಿಗೆ ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಇಬ್ಬರು ಮೀನುಗಾರರು ಮೃತಪಟ್ಟ ವಿಷಯವನ್ನು […]

ಸಿ.ಎಂ ಸಿದ್ದರಾಮ್ಯ ಪ್ರಧಾನಿ ನರೇಂದ್ರ ಮೋದಿ ಭೇಟಿ

ಬೆಂಗಳೂರು:ದೆಹಲಿ ಪ್ರವಾಸದಲ್ಲಿರುವ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿ ಮಾಡಿ ವಿಶೇಷ ಉಡುಗೊರೆ ನೀಡಿ ಸ್ವಾಗತಿಸಿ,ಬಳಿಕ ಮಾತುಕತೆ ನಡೆಸಿದರು.ಪ್ರಧಾನಿಯವರ ಜತೆ ಮಾತುಕತೆ ನಡೆಸಿದ ನಂತರ ಸಿ.ಎಂ ಸಿದ್ದರಾಮಯ್ಯನವರು ರಕ್ಷಣಾ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಲು ಮನವಿಯನ್ನು ಮಾಡಿಕೊಂಡರು.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.ಈ ಸಂದರ್ಭ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ […]

ಸ್ಪಂದನ ಸಂಜೀವಿನಿ ಒಕ್ಕೂಟ ಸದಸ್ಯರಿಂದ ಗದ್ದೆ ನಾಟಿ

ಕುಂದಾಪುರ:ಜಿಲ್ಲಾ ಪಂಚಾಯತ್ ಉಡುಪಿ,ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ,ಕೃಷಿ ಇಲಾಖೆ ಉಡುಪಿ ಜಿಲ್ಲೆ,ತಾಲೂಕು ಪಂಚಾಯತ್ ಕುಂದಾಪುರ,ಗ್ರಾಮ ಪಂಚಾಯತ್ ಹಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಡಿಲು ಭೂಮಿಗೆ ಮರುಜೀವ ನೀಡುವ ಕಾರ್ಯಕ್ರಮದ ಅಂಗವಾಗಿ ನಿರ್ಜೀವ ಸ್ಥಿತಿಯಲ್ಲಿದ್ದ ಭೂಮಿಯಲ್ಲಿ ಸ್ಪಂದನ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಂದ ಗದ್ದೆ ನಾಟಿ ಕಾರ್ಯ ನಡೆಯಿತು. ಸಂಜೀವಿನಿ ಸಂಘಗಳ ತಾಲೂಕು ಒಕ್ಕೂಟ ಅಧ್ಯಕ್ಷ ವಿಜಯ ಗಾಣಿಗ ಮಾತನಾಡಿ,ಹಡಿಲು ಭೂಮಿಗಳಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಕೆಲಸ ಕಾರ್ಯಗಳು ಶ್ಲಾಘನೀಯವಾದದು ಕೃಷಿ ಕ್ಷೇತ್ರದ ಬಗ್ಗೆ ಮಹಿಳೆಯರಿಗೆ […]

You cannot copy content of this page