ಕರಾವಳಿ ಭಾಗದಲ್ಲಿ ಕೈ ಕೊಟ್ಟ ಮಳೆ

ಕುಂದಾಪುರ:ಅಬ್ಬರಿಸಿ ಸುರಿದ ಮಳೆ ಕಳೆದ ಒಂದು ವಾರದಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಭಾಗಗಳಲ್ಲಿ ಕೈ ಕೊಟ್ಟಿದೆ.ಮಳೆ ಕುಂಠಿತವಾಗಿದ್ದರಿಂದ ನೀರಿನ ಹರಿವು ಇಲ್ಲದೆ ಮಕ್ಕಿ ಗದ್ದೆಗಳು (ಒಣಭೂಮಿ) ನೀರಿಲ್ಲದೆ ಒಣಗಿ ಹೋಗಿದ್ದು ಆರಂಭಿಕ ಹಂತದಲ್ಲಿಯೆ ಭತ್ತದ ಬೆಳೆ ಸೊರಗಿದೆ.ಆಗಷ್ಟ್ ತಿಂಗಳಿನಲ್ಲಿ ಧಾರಾಕಾರವಾಗಿ ಸುರಿಯ ಬೇಕಿದ್ದ ಮಳೆ,ವಾಡಿಕೆ ಗಿಂತಲೂ ಕಡಿಮೆ ಪ್ರಮಾಣದಲ್ಲಿ ಸುರಿದಿದ್ದು ದಿನವಿಡಿ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ.ಮಳೆ ಚೆನ್ನಾಗಿ ಸುರಿದರೆ ಮಾತ್ರ ಬೇಸಾಯ ಕೈಹಿಡಿಯಲ್ಲಿದೆ ಎಂದು ರೈತರು ಹೇಳುತ್ತಾರೆ.

ಸಂಜೀವಿನಿ ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಆಯೋಜನೆ

ಕುಂದಾಪುರ:ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ಮತ್ತು ಎಸ್‍ಎಲ್‍ಆರ್‍ಎಂ ಘಟಕ ಹೊಸಾಡು ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಬುಧವಾರ ನಡೆಯಿತು.ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಮೊವಾಡಿ ಸಂಪರ್ಕ ರಸ್ತೆಯ ಅಕ್ಕಪಕ್ಕದಲ್ಲಿ ಬಿದ್ದ ಕಸವನ್ನು ಸಂಗ್ರಹಿಸಿ ಎಸ್‍ಎಲ್‍ಆರ್‍ಎಂ ಘಟಕಕ್ಕೆ ರವಾನಿಸಲಾಯಿತು.ಈ ಸಂದರ್ಭ ಸಂಜೀವಿನಿ ಒಕ್ಕೂಟದ ಎಂಬಿಕೆ,ಎಲ್‍ಸಿಆರ್‍ಪಿ,ಕೃಷಿ ಉದ್ಯೋಗ ಸಖಿ ಮತ್ತು ಸದಸ್ಯರು,ಎಸ್‍ಎಲ್‍ಆರ್‍ಎಂ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.ಮೊವಾಡಿ ಸಂಪರ್ಕ ರಸ್ತೆ ಬದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಸವನ್ನು ಎಸೆದು ಹೋಗುವ ಪ್ರವೃತ್ತಿ ಆಧಿಕವಾಗುತ್ತಿದ್ದು ಈ ಬಗ್ಗೆ ಕ್ರಮ ಸೂಕ್ತ ಕೈಗೊಳ್ಳಬೇಕೆಂದು ಸಂಜೀವಿನಿ ಒಕ್ಕೂಟದ ಸದಸ್ಯರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಯನಿಬ್ಬರು ಸಮುದ್ರ ಪಾಲು,ಓರ್ವಳು ಮೃತ್ಯು,ಇನೋರ್ವಳ ರಕ್ಷಣೆ

ಉಡುಪಿ:ಮಡಿಕೇರಿ ಮೂಲದ ವಿದ್ಯಾರ್ಥಿನಿಯರಾದ ಮಾನ್ಯ (16),ಯಶಸ್ವಿನಿ (16) ಎನ್ನುವ ಗೆಳತಿಯರಿಬ್ಬರೂ ಮಲ್ಪೆ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದಾಗ ಅಲೆಯ ರಭಸಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಪರಿಣಾಮ ಮಾನ್ಯ ಎನ್ನುವ ವಿದ್ಯಾರ್ಥಿನಿ ಮೃತರಾಗಿದ್ದಾರೆ,ಆಕೆಯ ಸ್ನೇಹಿತೆ ಯಶಸ್ವಿನಿಯನ್ನು ರಕ್ಷಿಸಿದ ಘಟನೆ ನಡೆದಿದೆ.ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಸಂದರ್ಭ ನೀರಿನ ಸೆಳೆತಕ್ಕೆ ವಿದ್ಯಾರ್ಥಿಯನಿಬ್ಬರೂ ಕೊಚ್ಚಿಕೊಂಡು ಹೋಗಿದ್ದರು ಎನ್ನಲಾಗಿದೆ.ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ರಕ್ಷಿಸಿ ತೀರಕ್ಕೆ ತಂದಿದ್ದಾರೆ.ಈ ಪೈಕಿ ತೀವೃವಾಗಿ ಅಸ್ವಸ್ಥಗೊಂಡಿದ್ದ ಮಾನ್ಯ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.ಯಶಸ್ವಿನಿ ಅವರನ್ನು […]

You cannot copy content of this page