ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ದೇವಾಡಿಗರಿಗೆ ಅಭಿನಂದನೆ

ಕುಂದಾಪುರ:ಆಲೂರು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ರಾಜೇಶ್.ಎನ್ ದೇವಾಡಿಗ ಅವರನ್ನು ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಅಭಿನಂದಿಸಿ ಸಂಘದ ಕಛೇರಿಯಲ್ಲಿ ಗುರುವಾರ ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ ಹರ್ಕೂರು,ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ,ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವರಾಮ ಯಡ್ತರೆ,ವ್ಯವಸ್ಥಾಪಕ ಸಂಜೀವ ಪೂಜಾರಿ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಮೂರ್ತೆದಾರರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ವಾರ್ಷಿಕ ಮಹಾಸಭೆ:ಶೇ.10 ಡಿವಿಡೆಂಡ್ ಘೋಷಣೆ

ಕುಂದಾಪುರ:ಮೂರ್ತೆದಾರರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಅದರ 32ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸಂಘದ ತಲ್ಲೂರು ಮೂರ್ತೆದಾರರ ಸಭಾಭವನದಲ್ಲಿ ಬುಧವಾರ ನಡೆಯಿತು.ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಉದಯ ಪೂಜಾರಿ ಬಡಾಕೆರೆ ಸಭೆಯನ್ನುದ್ದೇಶಿಸಿ ಮಾತನಾಡಿ ಸಂಘವು ಎ ದರ್ಜೆಯ ಆಡಿಟ್ ವರ್ಗೀಕರಣ ಹೊಂದಿದ್ದು ವರದಿ ವರ್ಷದಲ್ಲಿ ರೂ.93,75,152.57 ನಿವ್ವಳ ಲಾಭ ಗಳಿಸಿದೆ.ಈ ಸಾಲಿನಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡುವುದಾಗಿ ಘೋಷಣೆ ಮಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪೂಜಾರಿ ವರದಿ ಮಂಡಿಸಿ […]

ಚಂದ್ರಯಾ-3 ಯಶಸ್ಸಿಗೆ ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ಹರ್ಷ

ಬೆಂಗಳೂರು:ಯಶ್ವಸಿಯಾಗಿ ಉಡಾವಣೆಗೊಂಡಿದ್ದ ಚಂದ್ರಯಾನ-2 ,2019 ರ ಸೆಪ್ಟೆಂಬರ್ 6 ರಂದು ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ ಅಂದಿನ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಕಣ್ಣೀರಿಟ್ಟು ತಮ್ಮ ನೋವಿನ ಭಾವನೆಯನ್ನು ಜಗತ್ತಿನ ಮುಂದಿಟ್ಟಿದ್ದರು.ಯಶಸ್ವಿ ಪ್ರಯೋಗ ಕೊನೆ ಕ್ಷಣದಲ್ಲಿ ಹಾದಿ ತಪ್ಪಿದ್ದಾಗ ಇಡಿ ಭಾರತ ದೇಶ ಶೋಕ ಸಾಗರದಲ್ಲಿ ಮುಳುಗಿ ಹೋಗಿತ್ತು.ವಿಜ್ಞಾನಿಗಳ ಜತೆಗೆ ಭಾರತೀಯರು ಕೂಡ ತಮ್ಮ ದುಗುಡವನ್ನು ಹೊರ ಹಾಕಿರುವುದು ಇನ್ನೂ ಕೂಡ ಕಣ್ಣ ಮುಂದಿದೆ.ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಇಸ್ರೋ ಅಧ್ಯಕ್ಷ ಕೆ.ಶಿವನ್ […]

You cannot copy content of this page