ಹುಟ್ಟು ಹಬ್ಬ ಆಚರಣೆ,ಅಂಗನವಾಡಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಕುಂದಾಪುರ:ಧಿಮಂತ ರಾಜಕಾರಣಿ ಹಾಗೂ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಮನೆ ಮಾತಾಗಿರುವ ದಿ ಆರ್.ಕೆ ಸಂಜೀವ ರಾವ್ ಖಂಬದಕೋಣೆ ಅವರ ಮರಿ ಮೊಮ್ಮಗ ಹಾಗೂ ಸಮಾಜ ಸೇವಕರಾದ ಉದ್ಯಮಿ ಕೆ.ಎಸ್ ಪ್ರಮೋದ್ ರಾವ್ ಅವರ ಮೊಮ್ಮಗ ಪ್ರಥಮ ರಾವ್ ಅವರ ಆರನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಖಂಬದಕೋಣೆ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ಸಿಹಿ ತಿಂಡಿ ಬುಧವಾರ ವಿತರಿಸಲಾಯಿತು.ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ರುದ್ರಾಭಿಷೇಕ ಪೂಜೆಯನ್ನು ಸಲ್ಲಿಸಲಾಯಿತು.ಬಿಜೆಪಿ ವಂಡ್ಸೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ […]

ಹುಂತನಗೋಳಿ ಅಮಾವಾಸ್ಯೆ ಜಾತ್ರಾ ಮಹೋತ್ಸವ ಸಂಪನ್ನ

ಕುಂದಾಪುರ:ಬೈಂದೂರು ತಾಲೂಕಿನ ಆಲೂರು ಗ್ರಾಮದ (ಹೇರೂರು) ಹುಂತನಗೋಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪ್ರದಾಯ ಬದ್ಧವಾಗಿ ಸೋಮವಾರ ನಡೆಯಿತು.ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಮಂಗಳಾರತಿ ಸೇವೆ,ಹುತ್ತಕ್ಕೆ ಹೂ ಸುತ್ತುವ ಸೇವೆ, ತೊಟ್ಟಿಲು ಸೇವೆ,ಸುತ್ತಕ್ಕಿ ಸೇವೆ,ತುಲಾಭಾರ ಸೇವೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿದರು.ದೇವಸ್ಥಾನದ ಅರ್ಚಕರಾದ ಶ್ರೀಕಾಂತ ಹೆಬ್ಬಾರ್,ಶಾಂತರಾಮ ಶೆಟ್ಟಿ,ಸುರೇಶ್ ನಾಯಕ್,ರಮೇಶ […]

ಕೆ.ಎಸ್ ಪ್ರಮೋದ್ ರಾವ್ ಅಭಿಮಾನಿಗಳಿಂದ ಜನ್ಮ ದಿನ ಆಚರಣೆ,ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ರುದ್ರಾಭಿಷೇಕ ಸಲ್ಲಿಕೆ

(ಗಣ್ಯಾತಿಗಣ್ಯರಿಂದ ಕೆ.ಎಸ್ ಪ್ರಮೋದ್ ರಾವ್ ಗೆ ಶುಭಹಾರೈಕೆ) ಕುಂದಾಪುರ:ಶೈಕ್ಷಣಿಕ ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರ ಸೇರಿದಂತೆ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡು ಸಾಮಾಜಿಕ ಕಾರ್ಯಗಳ ಮುಖೇನ ಗುರುತಿಸಿಕೊಂಡಿರುವ ಬೈಂದೂರು ತಾಲೂಕಿನ ಕಂಬದಕೋಣೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಸಂಸ್ಥಾಪಕರಲ್ಲಿ ಒಬ್ಬರಾಗಿರುವ,ಫೌಂಡರ್ ಎಂಜಿಎಂ ಅರ್ಥ್ ಮೂವರ್ಸ್ ನೊಯಿಡಾ,ಆರ್.ಕೆ ಸಂಜೀವ ರಾವ್ ಸ್ಮಾರಕ ದತ್ತಿ ಹಾಗೂ ವಿಧಿಇನ್ಫ್ರಾ ಸೊಲ್ಯೂಷನ್ಸ್ ಪ್ರೈ.ಲಿ ನಿರ್ದೇಶಕರಾದ ಕೆ.ಎಸ್ ಪ್ರಮೋದ್ ರಾವ್ ಜನ್ಮ ದಿನವನ್ನು (ಪ್ರಮೋದ್ ಅಣ್ಣ) ಅವರ ಅಭಿಮಾನಿ ಬಳಗ […]

You cannot copy content of this page