ದೇವಾಡಿಗ ಅಕ್ಷಯ ಕಿರಣ ಸೇವಾ ಪೌಂಡೇಶನ್ 170ನೇ ಸೇವಾಯಜ್ಞ

ಕುಂದಾಪುರ: ನೊಂದವರ ಬಾಳಿಗೆ ಬೆಳಕಾಗುತ್ತಿರುವ ದೇವಾಡಿಗ ಅಕ್ಷಯ ಕಿರಣದ ವತಿಯಿಂದ169 ನೆ ಸೇವಾಕಾರ್ಯದ ಅಂಗವಾಗಿ ಮುಂಬೈನ ಕಾಂದಿವಿಲಿಯಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಶ್ರೀನಿವಾಸ್ ದೇವಾಡಿಗರ ಮನೆಗೆ ತೆರಳಿ 40,000/- ಸಹಾಯ ಧನವನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಮುಂಬೈನ ಸೇವಾದಾರರುಗಳಾದ ಶ್ರೀ ಅಶೋಕ್ ದೇವಾಡಿಗ, ಪೋವಾಯಿ, ಪರಮೇಶ್ವರ್ ದೇವಾಡಿಗ, ನಾಯ್ಕ್ ನಕಟ್ಟೆ, ದಯಾನಂದ ದೇವಾಡಿಗ ನೆರೂಲ್, ವಿಠ್ಠಲ್ ದೇವಾಡಿಗ, ಅಂಧೇರಿ,ಗಣೇಶ್ ಎಸ್. ಬ್ರಹ್ಮಾವರ್ ಮತ್ತು ಸ್ಥಳೀಯರಾದ ಭಾಸ್ಕರ್ ದೇವಾಡಿಗರು ಮತ್ತು ವನಿತಾ ದೇವಾಡಿಗರು ಉಪಸ್ಥಿತರಿದ್ದರು. 170 ನೇ ಸೇವಾ ಕಾರ್ಯದ […]

ಹೆಮ್ಮಾಡಿ:ಲಾರಿ ಮತ್ತು ಟೆಂಪೊ ಮಾಲೀಕರ ಸಂಘದ ಅಂತ್ಯ

ಕುಂದಾಪುರ:ನಮ್ಮ ಸಂಘಟನೆಯ ಕೂಗು ರಾಜ್ಯಕ್ಕೆ ಮುಟ್ಟಿದೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು ಸಂಧಾನಕ್ಕೆ ಅಧಿಕಾರಿಗಳು ಒಪ್ಪಿದ್ದಾರೆ ಸಾಕಷ್ಟು ಚರ್ಚೆ ಕೂಡ ಆಗಿದೆ.ನಮ್ಮ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಿದ್ದರಿಂದ ಮುಷ್ಕರದ ಅಂಗವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿಗಳನ್ನು ತೆರವು ಗೊಳಿಸಲಾಗುವುದು ಎಂದು ಲಾರಿ ಮತ್ತು ಟೆಂಪೊ ಮಾಲೀಕರು ಮತ್ತು ಚಾಲಕರ ಸಂಘ ಬೈಂದೂರು ವಲಯದ ಜಂಟಿ ಅಧ್ಯಕ್ಷ ದಿವಾಕರ ಶೆಟ್ಟಿ ನೈಲಾಡಿ ಹೇಳಿದರು. ಲಾರಿ ಮತ್ತು ಟೆಂಪೊ ಮಾಲೀಕರು ಮತ್ತು ಚಾಲಕರ ಸಂಘ […]

ಹೊಸಾಡು:ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ಕುಂದಾಪುರ:ಸಂಪನ್ಮೂಲ ಕ್ರೋಢೀಕರಣ,ವಲಸೆ ಕಾರ್ಮಿಕರ ಶಿಕ್ಷಣಕ್ಕೆ ಒತ್ತು,ಅಮೃತಾ ಆರೋಗ್ಯ ಅಭಿಯಾನ,ಶೇ.100 ತ್ಯಾಜ್ಯ ಸಂಗ್ರಹಣೆ,ಮನೆ ಮನೆಗೆ ಕುಡಿಯುವ ನೀರು ಸಂಪರ್ಕ ವ್ಯವಸ್ಥೆ,ಮಕ್ಕಳಿಗಾಗಿ ಪ್ರತ್ಯೇಕ ಡಿಜಿಟಲ್ ಗ್ರಂಥಾಲಯ ಸ್ಥಾಪನೆ,ಉದ್ಯೋಗ ಖಾತ್ರಿ ಯೋಜನೆ ಪ್ರಗತಿ,15 ನೇ ಹಣಕಾಸು ಯೋಜನೆ ಅನುದಾನಗಳ ಸಮರ್ಪಕ ಬಳಕೆ ಕುರಿತು ವಿಶಿಷ್ಟ ಸಾಧನೆ ಮಾಡಿರುವ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿಗೆ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ದೊರೆತ್ತಿದೆ. ಕರ್ನಾಟಕ ಸರಕಾರ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗಾಂಧಿ ಜಯಂತಿ ದಿನದಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ […]

You cannot copy content of this page