ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ಪುರಪ್ರವೇಶ ಮೆರವಣಿಗೆ

ಕುಂದಾಪುರ: ಟ್ಯಾಬ್ಲೋ ಕುಣಿತ ಭಜನೆ ಪೇಟ ಸಹಿತ ಬಣ್ಣದ ಕೋಡೆ ಡೊಳ್ಳು ಕುಣಿತ ಚಂಡೆವಾದನ ಪೂರ್ಣಕುಂಭ ಸ್ವಾಗತದೊಂದಿಗೆ ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ಪುರಪ್ರವೇಶ ಮೆರವಣಿಗೆ ಅದ್ಧೂರಿಯಾಗಿ ಸೋಮವಾರ ನಡೆಯಿತು.ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಮ್ಮನವರು ಪುರಪ್ರವೇಶವನ್ನು ಮಾಡಿದರು.ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನ ನೂತನ ದಾರು ಬಿಂಬಿದ ಶೋಭಾಯಾತ್ರೆಯೂ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಭಾಶಿಯಿಂದ ಹೆಮ್ಮಾಡಿ ತನಕ ವಾಹನ ಜಾತಾದ ಮೂಲಕ,ಹೆಮ್ಮಾಡಿ ಯಿಂದ ಶ್ರೀ ದೇವಿಯ ಸನ್ನಿಧಾನದ ತನಕ ಕಾಲ್ನಡಿಗೆಯಲ್ಲಿ […]

ಭರತನಾಟ್ಯ ವಿದ್ಯಾರ್ಥಿಗಳಿಂದ ರಂಗ ಪ್ರವೇಶ

ಕುಂದಾಪುರ:ಭರತನಾಟ್ಯ ಕಲಾವಿದೆ ವಿದೂಷಿ ಸಹನಾ ರೈ ಮುಳ್ಳಿಕಟ್ಟೆ ಅವರಿಂದ ನಾಟ್ಯಭ್ಯಾಸವನ್ನು ಮಾಡಿರುವ ಸುಮಾರು 45ಕ್ಕೂ ಹೆಚ್ಚಿನ ಭರತನಾಟ್ಯ ವಿದ್ಯಾರ್ಥಿಗಳು ಹೊಸಾಡು ಅರಾಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ರಂಗಪ್ರವೇಶವನ್ನು ಮಾಡಿದರು.

ಚಿತ್ತೂರು ಶಾಲೆಯಲ್ಲಿ ಕ್ರಿಡೋತ್ಸವ ಕಾರ್ಯಕ್ರಮ,ಕಿಂಡರ್‍ಗಾರ್ಡನ್ ಉದ್ಘಾಟನೆ

ಸರಕಾರ ಹಾಗೂ ದಾನಿಗಳ ಸಹಭಾಗಿತ್ವದಲ್ಲಿ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಚಿತ್ತೂರು ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಿಂಡರ್ ಗಾರ್ಡನ್ ಅನ್ನು ಸಮಾಜ ಸೇವಕ ಕೃಷ್ಣಮೂರ್ತಿ ಮಂಜ ಹಾಗೂ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಆಲೂರು ಆಡಳಿತ ನಿರ್ದೇಶಕ ಡಾ.ರಾಜೇಶ್ ಬಾಯರಿ ಅವರು ಜಂಟಿಯಾಗಿ ಶನಿವಾರ ಉದ್ಘಾಟಿಸಿದರು. ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಚಿತ್ತೂರು ಶಾಲೆಯಲ್ಲಿ ಕ್ರೀಡೋತ್ಸವ,ಕಿಂಡರ್‍ಗಾರ್ಡನ್ ಉದ್ಘಾಟನೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೃಷ್ಣಮೂರ್ತಿ […]

You cannot copy content of this page