ಉಪ್ಪುಂದ:ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ರಥೋತ್ಸವ

ಕುಂದಾಪುರ:ಬೈಂದೂರು ತಾಲೂಕಿನ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪ್ರಸಾದ ಸ್ವೀಕರಿಸಿದರು. ಕೋಟೇಶ್ವರದ ’ಕೊಡಿ’ ಹಬ್ಬದ ಮಾರನೇಯ ದಿನದಂದು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೊಡಿ ಹಬ್ಬ ನಡೆಯುತ್ತದೆ.ಬೈಂದೂರು ಹಾಗೂ ಉಪ್ಪುಂದ ಭಾಗದ ಜನರು ’ಉಪ್ಪುಂದದ ಕೊಡಿ ಹಬ್ಬ’ ಎಂದು ಕರೆಯುವ ಸಂಪ್ರದಾಯವಿದೆ.ಹೊಸ ಮದುಮಕ್ಕಳು ಹಾಗೂ ಸಂತಾನ ಭಾಗ್ಯಕ್ಕಾಗಿ ಹರಕೆ ಹೊತ್ತುಕೊಳ್ಳುವವರು ಹಬ್ಬದ ದಿನದಂದು ಶ್ರೀ ದೇವಿಯ ದರ್ಶನ ಮಾಡಿ […]

ವೈಷ್ಣವಿ ಖಾರ್ವಿಗೆ ಕಂಚಿನ ಪದಕ

ಕುಂದಾಪುರ:ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಯಕುಪ್ಪೆಡ್ ಬೆಂಜ್ ಪ್ರೆಸ್ ಸ್ಪರ್ಧೆಯ 69 ಕೆ.ಜಿ ವಿಭಾಗದಲ್ಲಿ ವೈಷ್ಣವಿ ಖಾರ್ವಿ ಗಂಗೊಳ್ಳಿ ಕಂಚಿನ ಪದಕ ಜಯಿಸಿದ್ದಾರೆ.ಅವರು ಕುಂದಾಪುರ ನ್ಯೂ ಹಕ್ರ್ಯುಲೆಸ್ ಜಿಮ್ ಹಾಗೂ ಕಿಂಗ್ ಫಿಷರ್ ಸ್ಪೋಟ್ರ್ಸ್ ಕ್ಲಬ್ ಸದಸ್ಯೆ.

ಬೃಹತ್ ರಕ್ತದಾನ ಶಿಬಿರ,ಉಚಿತ ನೇತ್ರ ತಪಾಸಣೆ ಕಾರ್ಯಕ್ರಮ

ಕುಂದಾಪುರ:ಲಯನ್ಸ್ ಕ್ಲಬ್ ಹಕ್ಲಾಡಿ,ರೋಟರಿ ಕ್ಲಬ್ ಗಂಗೊಳ್ಳಿ,ಇಂಡಿಯನ್ ರೆಡ್‍ಕ್ರಾಸ್ ಕುಂದಾಪುರ,ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ,ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ,ಪಂಚಂಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ,ಗ್ರಾಮ ಪಂಚಾಯತ್ ಹೊಸಾಡು ಹಾಗೂ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಸಂಯುಕ್ತ ಆಶ್ರಯದಲ್ಲಿ ಹೊಸಾಡು ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ,ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಭಾನುವಾರ ನಡೆಯಿತು. ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುಮಾರ […]

You cannot copy content of this page