ಶಿಕ್ಷಕ ಉದಯ ಕುಮಾರ್ ಶೆಟ್ಟಿಗೆ ರಾಜ್ಯಪಾಲರಿಂದ ಪುರಸ್ಕಾರ

ಕುಂದಾಪುರ:ಕರ್ನಾಟ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರಿನ ಟೌನ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕಿನ ಬೈಂದೂರು ವಲಯದ ಆಲೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಉದಯ ಕುಮಾರ್ ಶೆಟ್ಟಿ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಮತದಾರ ಸಾಕ್ಷರತಾ ಕ್ಲಬ್ ಸಂಚಾಲಕ ಪುರಸ್ಕಾರವನ್ನು ನೀಡಿ ಗೌರವಿಸಿದರು.ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ ಮೀನಾ,ಬಿ.ಬಿ.ಎಂ.ಪಿ ಆಯುಕ್ತ ತುಷಾರ ಗಿರಿನಾಥ್ ಉಪಸ್ಥಿತರಿದ್ದರು.

ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ಪುರಪ್ರವೇಶ ಮೆರವಣಿಗೆ

ಕುಂದಾಪುರ: ಟ್ಯಾಬ್ಲೋ ಕುಣಿತ ಭಜನೆ ಪೇಟ ಸಹಿತ ಬಣ್ಣದ ಕೋಡೆ ಡೊಳ್ಳು ಕುಣಿತ ಚಂಡೆವಾದನ ಪೂರ್ಣಕುಂಭ ಸ್ವಾಗತದೊಂದಿಗೆ ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ಪುರಪ್ರವೇಶ ಮೆರವಣಿಗೆ ಅದ್ಧೂರಿಯಾಗಿ ಸೋಮವಾರ ನಡೆಯಿತು.ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಮ್ಮನವರು ಪುರಪ್ರವೇಶವನ್ನು ಮಾಡಿದರು.ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನ ನೂತನ ದಾರು ಬಿಂಬಿದ ಶೋಭಾಯಾತ್ರೆಯೂ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಭಾಶಿಯಿಂದ ಹೆಮ್ಮಾಡಿ ತನಕ ವಾಹನ ಜಾತಾದ ಮೂಲಕ,ಹೆಮ್ಮಾಡಿ ಯಿಂದ ಶ್ರೀ ದೇವಿಯ ಸನ್ನಿಧಾನದ ತನಕ ಕಾಲ್ನಡಿಗೆಯಲ್ಲಿ […]

ಭರತನಾಟ್ಯ ವಿದ್ಯಾರ್ಥಿಗಳಿಂದ ರಂಗ ಪ್ರವೇಶ

ಕುಂದಾಪುರ:ಭರತನಾಟ್ಯ ಕಲಾವಿದೆ ವಿದೂಷಿ ಸಹನಾ ರೈ ಮುಳ್ಳಿಕಟ್ಟೆ ಅವರಿಂದ ನಾಟ್ಯಭ್ಯಾಸವನ್ನು ಮಾಡಿರುವ ಸುಮಾರು 45ಕ್ಕೂ ಹೆಚ್ಚಿನ ಭರತನಾಟ್ಯ ವಿದ್ಯಾರ್ಥಿಗಳು ಹೊಸಾಡು ಅರಾಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ರಂಗಪ್ರವೇಶವನ್ನು ಮಾಡಿದರು.

You cannot copy content of this page