ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದ ವಾರ್ಷಿಕ ಮಹಾಸಭೆ, ದಶಮಾನೋತ್ಸವ ಕಾರ್ಯಕ್ರಮ
ಬೈಂದೂರು:ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ಅದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ದಶಮಾನೋತ್ಸವ ಕಾರ್ಯಕ್ರಮ ಹಾಗೂ ನಾಯ್ಕನಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮೀಣ ಮಳಿಗೆ ಉದ್ಘಾಟನಾ ಕಾರ್ಯಕ್ರಮ ಶ್ರೀಗೋಪಾಲಕೃಷ್ಣ ಕಲ್ಯಾಣ ಮಂಟಪ ನಾಗೂರುನಲ್ಲಿ ಭಾನುವಾರ ನಡೆಯಿತು.ರೈತ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.ಮೂಕಾಂಬಿಕಾ ಬೆಳೆಗಾರರ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಂದ್ರ ಸಾಧನೆಯ ವರದಿಯನ್ನು ಮಂಡಿಸಿದರು.ಒಕ್ಕೂಟಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಭತ್ತವನ್ನು ನೀಡಿದ ಸುಬ್ಬಣ್ಣ ಶೆಟ್ಟಿ ಹಾಗೂ ರುಕ್ಮಿಣಿ,ಸಂಜು ಪೂಜಾರಿ ಮತ್ತು ಯೋಗ ಧನ್ವಿ ಮರವಂತೆ ಅವರನ್ನು,ಮಾಜಿ ನಿರ್ದೇಶಕರನ್ನು […]



























































































































































































































































































































































































































































































































































































































































































































































































































































































































































































































































































































































































































































































































































































































































































