ಶ್ರೀಸುಬ್ರಹ್ಮಣ್ಯ ದೇವರಿಗೆ ನಾಗಮಂಡಲೋತ್ಸವ ಸೇವೆ

ಕುಂದಾಪುರ:ತಾಲೂಕಿನ ಗುಡ್ಡಮ್ಮಾಡಿ ಶ್ರೀಸುಬ್ರಹ್ಮಣ್ಯ ದೇವರ ಎರಡನೇ ದಿನದ ಷಷ್ಠಿ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಬುಧವಾರ ಹಾಲಿಟ್ಟು ಸೇವೆ,ನಾಗಮಂಡಲ ಸೇವೆ ಜರುಗಿತು.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.

ಶ್ರೀಸುಬ್ರಹ್ಮಣ್ಯ ದೇವರಿಗೆ ತುಲಾಭಾರ ಸೇವೆ ಸಮರ್ಪಣೆ

ಕುಂದಾಪುರ:ಗುಡ್ಡಮ್ಮಾಡಿ ಶ್ರೀಸುಬ್ರಹ್ಮಣ್ಯ ದೇವರ ಎರಡನೇ ದಿನದ ಷಷ್ಠಿ ಮಹೋತ್ಸವ ಅಂಗವಾಗಿ ಶ್ರೀದೆವರಿಗೆ ತುಲಾಭಾರ ಸೇವೆ,ಹಣ್ಣುಕಾಯಿ,ಮಂಗಳಾರತಿ,ಹರಿವಾಣ ನೈವೇದ್ಯ ಸೇವೆ,ಅನ್ನದಾನ ಸೇವೆ ಬುಧವಾರ ನಡೆಯಿತು.ಕಷ್ಟ ಕಾಲದಲ್ಲಿ ಹೇಳಿಕೊಂಡ ತುಲಾಭಾರ ಸೇವೆಯನ್ನು ಸಂತಾನಕಾರಕನಾದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಭಕ್ತರು ಸಮರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ದೇವಳದ ಅನುವಂಶಿಕ ಮೊಕ್ತೇಸರರಾದ ಅರುಣ ಕುಮಾರ್ ಶೆಟ್ಟಿ,ಅಭಿನಂದನ ಶೆಟ್ಟಿ,ಅರ್ಚಕರು,ಗ್ರಾಮಸ್ಥರು ಉಪಸ್ಥಿತರಿದ್ದರು. ಸಾರ್ವಜನಿಕ ಅನ್ನಸಂತರ್ಪಣೆಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಶ್ರೀಸುಬ್ರಹ್ಮಣ್ಯ ದೇವರ ಷಷ್ಠಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ಮಂಗಳವಾರ ನಡೆಯಿತು.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ […]

ಇತಿಹಾಸ ಪ್ರಸಿದ್ಧ ಶ್ರೀ ಜೈನ ಶೇಡಿಬೀರ ನಾಗ ಪರಿವಾರ ದೈವಸ್ಥಾನ ಶಿರೂರು ವಾರ್ಷಿಕ ಜಾತ್ರಾ ಮಹೋತ್ಸವ

ಬೈಂದೂರು:ತಾಲೂಕಿನ ಶಿರೂರು ಶ್ರೀ ಜೈನ ಶೇಡಿಬೀರ ನಾಗ ಪರಿವಾರ ದೈವಸ್ಥಾನದ ವಾರ್ಷಿಕ ಹಾಲು ಹಬ್ಬ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ಅದ್ದೂರಿಯಾಗಿ ನಡೆಯಿತು.ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿ ಅಂತೆ ಜೈನ ಶೇಡಿಬೀರ ದೇವರಿಗೆ ಸಮರ್ಪಿಸುವ ಚಿನ್ನಾಭರಣವನ್ನುಆರ್ಮಕ್ಕಿ ಮನೆಯಿಂದ ವೈಭವದ ಮೆರವಣಿಗೆ ಮೂಲಕ ತರಲಾಗುತ್ತದೆ.ಪೂಜೆ ಸಲ್ಲಿಸಿ ದೇವರಿಗೆ ಚಿನ್ನಾಭರಣವನ್ನು ತೋಡಿಸುವುದರ ಮೂಲಕ ವಾರ್ಷಿಕವಾಗಿ ನಡೆಯುವ ಜಾತ್ರೆಗೆ ಚಾಲನೆ ಸಿಗುತ್ತದೆ.ಜೈನ ಶೇಡಿಬೀರ ದೇವರಿಗೆ ಸಮರ್ಪಿಸುವ ಚಿನ್ನವನ್ನು ಆರ್ಮಕ್ಕಿ ಮನೆಯಲ್ಲಿ ಪೂಜಿಸಿ, ಸಿಹಿಯನ್ನು ವಿತರಿಸುವ ಪದ್ಧತಿಯೂ […]

You cannot copy content of this page