ಹೊಸೂರು ಪ್ರೌಢಶಾಲೆ: ಸೈಕಲ್ ಸ್ಟ್ಯಾಂಡ್,ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಕುಂದಾಪುರ: ಹೊಸೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನೂತನವಾಗಿ ನಿರ್ಮಿಸಿದ ಸೈಕಲ್ ಸ್ಟ್ಯಾಂಡ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭ ನಡೆಯಿತು.ಮಾಜಿ ಆಡಳಿತ ಮಂಡಳಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿಯವರು ನೂತನವಾಗಿ ನಿರ್ಮಿಸಿರುವ ಸೈಕಲ್ ಸ್ಟ್ಯಾಂಡ್ ಅನ್ನು ಉದ್ಘಾಟಿಸಿದರು.ಮಾಜಿ ಆಡಳಿತ ಮಂಡಳಿ ಸದಸ್ಯ ಸಬ್ಲಾಡಿ ಮಂಜಯ್ಯ ಶೆಟ್ಟಿ ಮತ್ತು ಮಾಜಿ ಆಡಳಿತ ಮಂಡಳಿ ಸದಸ್ಯರಾದ ಡಾ.ಅತುಲ್ ಕುಮಾರ ಶೆಟ್ಟಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಶುಭಹಾರೈಸಿದರು. ರಾಜ್ಯೋತ್ಸವ ಪ್ರಶಸ್ತಿ […]

ಶ್ರೀರಾಮೋತ್ಸವ,ಶ್ರೀರಾಮ ವೇಷ ಸ್ಪರ್ಧೆ

ಕುಂದಾಪುರ:ಅಯೋಧ್ಯೆ ಶ್ರೀರಾಮ ದೇವರ ಪ್ರತಿಷ್ಠೆ ಅಂಗವಾಗಿ ಹೊಸಾಡು ಗ್ರಾಮದ ಅರಾಟೆ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ದೇವರಿಗೆ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಸೇವೆ,ಹಣ್ಣು ಕಾಯಿ,ಹೋಮ,ಭಜನೆ,ಅನ್ನದಾನ ಸೇವೆ ಕಾರ್ಯಕ್ರಮ ಸೋಮವಾರ ನಡೆಯಿತು.ದೀಪಗಳನ್ನು ಬೆಳಗಿಸಿ ಆರಾಧಿಸಲಾಯಿತು.ಪುಟಾಣಿ ಮಕ್ಕಳು ಶ್ರೀರಾಮ ದೇವರ ವೇಷ ಧರಿಸಿ ಸಂಭ್ರಮಸಿದರು.ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಭಜನೆ ಪುಸ್ತಕ ನೀಡಿ ಗೌರವಿಸಲಾಯಿತು.

ಹೋಮ ಯಾಗದಲ್ಲಿ ಭಾಗಿಯಾದ ವಾನರ ರೂಪಿ ಹನುಮ

ಬೆಂಗಳೂರು:ಗದಗ ಜಿಲ್ಲೆ ಲಕ್ಷ್ಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ನಡೆದ ಹೋಮ ಯಾಗದಲ್ಲಿ ವಾನರ ರೂಪಿ ಹನುಮ ಭಾಗಿಯಾಗಿದ್ದಾನೆ.ರಾಮ ಪ್ರಾಣ ಪ್ರತಿಷ್ಠಾಪನೆ ದಿನದ ಅಂಗವಾಗಿ ಯಾಗ ಆಯೋಜಿಸಲಾಗಿತ್ತು.ಆ ವೇಳೆ ಪ್ರತ್ಯಕ್ಷನಾದ ಕೋತಿ ಯಾಗ ವಿಧಿಗಳನ್ನ ವೀಕ್ಷಿಸುತ್ತ ಕುಳಿತಿದೆ. ಗದಗದ ಯೋಗ ತಂಡದಿಂದ ದೇವಸ್ಥಾನದಲ್ಲಿ ಅಗ್ನಿಹೋತ್ರ ಹೋಮ ಆಯೋಜಿಸಲಾಗಿತ್ತು. ಹೋಮ ಆರಂಭವಾಗುತ್ತಿದ್ದಂತೆ ಕೋತಿ ಸ್ಥಳಕ್ಕೆ ಹಾಜರಾಗಿದೃ.ಸುತ್ತಲು ಜನ ಕೂತಿದ್ದರೂ ಯಾಗದ ಸ್ಥಳಕ್ಕೆ ದೌಡಾಯಿಸಿದ ವಾನರ ಕೆಲವು ಸಮಯದ ವರೆಗೆ ಪೂಜೆಯಲ್ಲಿ ಪಾಲ್ಗೊಂಡಿತ್ತು.

You cannot copy content of this page