ಪರಿಯಾಳ ಸಮಾಜ ಸಭೆ,ಧನಸಹಾಯ ವಿತರಣೆ

ಕುಂದಾಪುರ:ತಾಲೂಕು ಪರಿಯಾಳ ಸಮಾಜದ ಸಭೆ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಸಾಲಿಯನ್ ತ್ರಾಸಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಗೌರವಾಧ್ಯಕ್ಷ ಸುಜಯ್ ಸುವರ್ಣ ಕುಂಭಾಸಿ,ಮಹಾಸಭಾ ಕಾರ್ಯದರ್ಶಿ ಸಂದೀಪ್ ಸಾಲಿಯನ್ ಬ್ರಹ್ಮಾವರ,ಮಹಿಳಾ ಸಂಘದ ಅಧ್ಯಕ್ಷೆ ಸುಜಾತ ಸಾಲಿಯಾನ್ ತ್ರಾಸಿ,ತಾಲೂಕು ಕಾರ್ಯದರ್ಶಿ ಪ್ರಸನ್ನ ಸಾಲಿಯಾನ್ ಕುಂದಾಪುರ,ಉಪಾಧ್ಯಕ್ಷ ಸುರೇಶ್ ಸುವರ್ಣ ನಾವುಂದ,ಸಮಾಜದ ಹಿರಿಯರಾದ ಗಣಪ ಸುವರ್ಣ ಕೋಟೇಶ್ವರ,ಜಿಲ್ಲಾ ಮಾಜಿ ಅಧ್ಯಕ್ಷ ಸದಾಶಿವ್ ಬಂಗೇರ ಕುರ್ಕಾಲು ಉಪಸ್ಥಿತರಿದ್ದರು.ಬೈಕ್ ಅಪಘಾತದಲ್ಲಿ ಮೂಳೆ ಮುರಿತದಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ವಿಕ್ರಂ ಸುವರ್ಣ ಮರವಂತೆ ಅವರಿಗೆ ವೈದ್ಯಕೀಯ ಧನಸಹಾಯ ನೀಡಲಾಯಿತು.

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮೀನುಗಾರ ವೆಂಕಟರಮಣ ಖಾರ್ವಿಗೆ ಆಹ್ವಾನ

ಕುಂದಾಪುರ:ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಮೀನುಗಾರ ಸಮುದಾಯದ ಮುಖಂಡರಾದ ಬೈಂದೂರು ತಾಲೂಕಿನಿಂದ ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದ ಅದರ ಅಧ್ಯಕ್ಷ ವೆಂಕಟರಮಣ ಖಾರ್ವಿ ಹಾಗೂ ಪತ್ನಿ ಪ್ರಮೀಳಾ ಅವರಿಗೆ ಆಹ್ವಾನ ನೀಡಿದೆ.ಮೀನುಗಾರರಾದ ವೆಂಕಟರಮಣ ಮತ್ತು ಅವರ ಪತ್ನಿ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ.ಮಂಗಳೂರು ಮತ್ತು ಉಡುಪಿಯಿಂದಲೂ ಕೂಡ ಮೀನುಗಾರ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೀನುಗಾರರ ಪ್ರತಿನಿಧಿಯಾಗಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ರಾಜ್ಯದ ಮೀನುಗಾರಿಕೆ ಸಚಿವ […]

ಆಲೂರು:ಮೈದಾನ ನಿರ್ಮಾಣಕ್ಕೆ ಮನವಿ

ಕುಂದಾಪುರ:ಸಾರ್ವಜನಿಕರ ಕೌಶಲ್ಯ ಅಭಿವೃದ್ಧಿಗಾಗಿ ಹಾಗೂ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಮೈದಾನದ ಅವಶ್ಯಕತೆ ಇರುವುದರಿಂದ ಕುಂದಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಸುಸಜ್ಜಿತವಾದ ಮೈದಾನವನ್ನು ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಮೈದಾನ ನಿರ್ಮಾಣಕ್ಕೆ ಜಾಗವನ್ನು ಮೀಸಲು ಇರಿಸುವಂತೆ ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇನ್.ಎನ್ ದೇವಾಡಿಗ ಹಾಗೂ ಪಿಡಿಒ ರೂಪ ಗೋಪಿ ಅವರಿಗೆ ಶ್ರೀರಾಮೇಶ್ವರ ಸ್ಪೋಟ್ರ್ಸ್ ಕ್ಲಬ್ ಆಲೂರು ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.ಶ್ರೀರಾಮೇಶ್ವರ ಸ್ಪೋರ್ಟ್ ಕ್ಲಬ್ ಉಪಾಧ್ಯಕ್ಷರು ಹಾಗೂ ಪಂಚಾಯತ್ ಸದಸ್ಯರಾದ ಸುಬ್ಬಣ್ಣ ಶೆಟ್ಟಿ ಆಲೂರು,ಕಾರ್ಯದರ್ಶಿ […]

You cannot copy content of this page