ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ಮಂಗಳೂರು:ನೂತನ ಮನೆ ಕೀಲಿಕೈ ಹಸ್ತಾಂತರ

ಮಂಗಳೂರು:ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ (ರಿ) ಮಂಗಳೂರು ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ವಿಟ್ಲ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ದೇವಸ್ಥಾನದ ಹತ್ತಿರದಲ್ಲಿ ನಿರ್ಮಾಣಗೊಂಡಿರುವ “ಶ್ರೀದೇವಿ ನಿಲಯ” ನೂತನ ಮನೆಯ ಕೀಲಿಕೈಯನ್ನು ಹನುಮ ಗಿರಿಮೇಳದ ಕಲಾವಿದ ಶ್ರೀ ರೂಪೇಶ್ ಆಚಾರ್ಯ ಅವರಿಗೆ ಭಾನುವಾರ ಹಸ್ತಾಂತರ ಮಾಡಲಾಯಿತು.ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಹಾಗೂ ನೂತನ ಮನೆಯ ನಿರ್ಮಾಣಕ್ಕೆ ಕಾರಣೀಕರ್ತರಾದ ದಾನಿಗಳಾದ ಅಶೋಕ್ ಶೆಟ್ಟಿ ಬೆಳ್ಳಾಡಿ ಅವರು ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿ ಶುಭಹಾರೈಸಿದರು.ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ವಿಟ್ಲ ಘಟಕದ ಪ್ರಧಾನ […]

ಗಂಗೊಳ್ಳಿ:ಬೈಂದೂರು ವೃತ್ತ ನಿರೀಕ್ಷಕರಿಗೆ ಮನವಿ

ಕುಂದಾಪುರ:ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ಅಂಗಡಿಯೊಂದರಿಂದ ಲಕ್ಷಾಂತರ.ರೂ ಮೌಲ್ಯದ ಸೀಸ ಕಳವುಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸುವಂತೆ ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಬೈಂದೂರು ವೃತ್ತ ನಿರೀಕ್ಷ ಸವಿತ್ರತೇಜ ಅವರನ್ನು ಶುಕ್ರವಾರ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭ ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಗಂಗೊಳ್ಳಿ,ಗೌರವಾಧ್ಯಕ್ಷ ಗಣಪತಿ ಖಾರ್ವಿ,ಮೀನುಗಾರ ಮುಖಂಡ ರಮೇಶ ಕುಂದರ್, ಪರ್ಸಿನ್ ಬೋಟ್ ಹಾಗೂ ವಿವಿಧ ಮೀನುಗಾರ ಸಂಘಟನೆಯ ಪ್ರಮುಖರು,ಮೀನುಗಾರರು ಉಪಸ್ಥಿತರಿದ್ದರು.

ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಬಿಜೆಪಿ ಬೈಂದೂರು ಮಂಡಲ ವತಿಯಿಂದ ಗ್ರಾಮ ಚಲೋ ಅಭಿಯಾನ ಕಾರ್ಯಾಗಾರ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.ಮಂಗಳೂರು ವಿಭಾಗ ಸಹ ಪ್ರಭಾರಿ ರಾಜೇಶ್ ಕಾವೇರಿ ಅಭಿಯಾನದ ಕುರಿತು ಮಾಹಿತಿ ನೀಡಿದರು.ಗ್ರಾಮ ಚಲೋ ಅಭಿಯಾನದ ಮಂಡಲ ಸಹ ಸಂಚಾಲಕ ಸಾಮ್ರಾಟ್ ಶೆಟ್ಟಿ,ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.ಮಹೇಂದ್ರ ಪೂಜಾರಿ ಸ್ವಾಗತಿಸಿದರು.ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ವಂದಿಸಿದರು.

You cannot copy content of this page