ಲಯನ್ಸ್ ಪ್ರಾಂತೀಯ ಸಮ್ಮೇಳನ,ಕನಕ 2025 ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ:ಕಳೆದ ಹತ್ತೊಂಭತ್ತು ವರ್ಷಗಳಿಂದ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಮೂಲಕ ಮುಂಬೈ ಸೇರಿದಂತೆ ಉಡುಪಿ ಜಿಲ್ಲೆಯ ಭಾಗದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದ್ದು.ಅಶಕ್ತರ ಬಾಳಿಗೆ ನೆರವನ್ನು ಒದಗಿಸಿಕೊಡುವುದರ ಜತೆಗೆ ಸೇವಾ ಕಾರ್ಯಗಳನ್ನು ಮಾಡುತ್ತಾ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ ಎಂದು ಉದ್ಯಮಿಗಳಾದ ಲಯನ್ ಪ್ರಾಂತೀಯ ಅಧ್ಯಕ್ಷ ಎಂಜೆಎಫ್ ಕನಕ ಜಗದೀಶ ಶೆಟ್ಟಿ ಕುದ್ರಕೋಡು ಹೇಳಿದರು.ಲಯನ್ಸ್ ಇಂಟರ್ ನ್ಯಾಷನಲ್ ಪ್ರಾಂತ್ಯ 4 ಜಿಲ್ಲೆ 317ಸಿ ವತಿಯಿಂದ ಜ್ಯುವೆಲ್ ಪಾರ್ಕ್ ಹೆಮ್ಮಾಡಿಯಲ್ಲಿ ಶನಿವಾರ ನಡೆದ ಲಯನ್ಸ್ ಪ್ರಾಂತೀಯ ಸಮ್ಮೇಳನ ಕನಕ-2025 […]

ತ್ರಾಸಿ:ಬೆಂಕಿ ತಗುಲಿ ಕಾರು ಭಸ್ಮ

ಕುಂದಾಪುರ:ತಾಲೂಕಿನ ತ್ರಾಸಿ ಸರ್ಕಲ್ ಬಳಿ ಪೆಟ್ರೋಲ್ ಬಂಕ್ ಎದುರುಗಡೆ ಆಕಸ್ಮಿಕವಾಗಿ ತಗುಲಿದ ಬೆಂಕಿ ಕೆನ್ನಾಲಿಗೆಗೆ ವಿನಾಯಕ ಗ್ಯಾರೇಜ್ ಬಳಿ ನಿಲ್ಲಿಸಿದ ಹಳೆ ಕಾರೊಂದು ಸುಟ್ಟು ಕರಕಲಾಗಿದ್ದ ಘಟನೆ ಭಾನುವಾರ ನಡೆದಿದೆ.ಬೈಂದೂರು ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಬಂಕಿನಲ್ಲಿರುವ ಬೆಂಕಿ ನಿರೋಧಕ ಉಪಕರಣದ ಮೂಲಕ ಬೆಂಕಿಯನ್ನು ತಹಬದಿಗೆ ತರಲು ಪ್ರಾಥಮಿಕ ಹಂತದಲ್ಲಿ ಪ್ರಯತ್ನಿಸಿದ್ದರು.

ಪಡುವರಿ ಕಲ್ಲಾರ್‍ಹಿತ್ಲು,ನಜ್ರೆ ಹಿತ್ಲು ರಸ್ತೆ ಅಭಿವೃದ್ಧಿಗೆ ಆಗ್ರಹ

ಕುಂದಾಪುರ:ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಕಲ್ಲಾರ್ ಹಿತ್ಲು ಮತ್ತು ನಜ್ರೆಹಿತ್ಲು ಪರಿಸರಕ್ಕೆ ಸಂಪರ್ಕ ಕಲ್ಪಿಸುವ ಸುಮಾರ್ 1 ಕಿ.ಮೀ ವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ.ದುಸ್ಥಿತಿಯಲ್ಲಿದ್ದ ರಸ್ತೆಯಲ್ಲಿ ಸಾಗುವುದು ಕಷ್ಟಕರವಾಗಿದ್ದು.ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಸ್ಥಳೀಯ ಸ್ವಸಾಹಯ ಸಂಘಗಳಾದ ಆಶಾದೀಪ,ದಿವ್ಯಜ್ಯೋತಿ,ಪ್ರಕೃತಿ,ಸ್ಪಂದನ ಹಾಗೂ ಧರ್ಮಸ್ಥಳ ಸ್ವಸಾಹಯ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಬೈಂದೂರು ಪಟ್ಟಣ ಪಂಚಾಯಿತಿಗೆ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.ರಸ್ತೆಯನ್ನು ದುರಸ್ತಿಗೊಳಿಸುವಲ್ಲಿ ಇಲ್ಲಿ ತನಕ ಯಾವುದೆ ರೀತಿ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ.

You cannot copy content of this page