ಇಬ್ರಾಹಿಂ ಗಂಗೊಳ್ಳಿಗೆ ಸನ್ಮಾನ

ಕುಂದಾಪುರ:ತುರ್ತು ಸಂದರ್ಭದ ಪರಿಸ್ಥಿತಿಯಲ್ಲಿ ಹಾಗೂ ಅಪಘಾತದ ಸಮಯದಲ್ಲಿ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲು,ಅನಾಥ ಶವಗಳನ್ನು ಶವಾಗಾರಕ್ಕೆ ತಲುಪಿಸಲು ಆಂಬ್ಯುಲೆನ್ಸ್ ಸೇವೆ ಮೂಲಕ ಜನಾಸೇವಾ ಕಾರ್ಯಗಳನ್ನು ಮಾಡುತ್ತಿರುವ ಜೀವರಕ್ಷಕ ಎಂದೆ ಖ್ಯಾತಿಗಳಿಸಿರುವ ಸಮಾಜ ಸೇವಕ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ನಿವಾಸಿಯಾಗಿರುವ ಮೊಹಮ್ಮದ್ ಇಬ್ರಾಹಿಂ ಗಂಗೊಳ್ಳಿ ಅವರನ್ನು ಗಂಗೊಳ್ಳಿಯಲ್ಲಿ ನಡೆದ ಜೈ ಜವಾನ್ ಜೈ ಕಿಸಾನ್ ಕ್ರಿಕೆಟ್ ಟ್ರೋಫಿ-2024 ರ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅರಾಟೆಯಲ್ಲಿ ಭೀಕರ ಅಪಘಾತ ಬ್ಯಾಂಕ್ ಮ್ಯಾನೇಜರ್ ಸಾವು

ಕುಂದಾಪುರ:ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಾಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೆನರಾ ಬ್ಯಾಂಕ್ ಮರವಂತೆ ಶಾಖೆ ಮ್ಯಾನೇಜರ್ ಮುಂಬಯಿ ಮೂಲದ ನಿವಾಸಿ ರಾಹುಲ್ ಬಾಲಕೃಷ್ಣ ರಂಖಬ್ಮೆ ಎನ್ನುವ ವ್ಯಕ್ತಿ ಶನಿವಾರ ಸಾವನ್ನಪ್ಪಿದ ಘಟನೆ ನಡೆದಿದೆ.ಬೈಂದೂರು ಕಡೆಯಿಂದ ಕುಂದಾಪುರ ಕಡೆಯಿಂದ ಸಾಗುತ್ತಿದ್ದ ಕೇರಳ ನೋಂದಣಿ ಹೊಂದಿರುವ ಲಾರಿ ಅರಾಟೆ ಬಳಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಬೈಕ್ ಸವಾರ […]

ಮರವಂತೆ:ಸತೀಶ್ ಪೂಜಾರಿಗೆ ಸನ್ಮಾನ

ಕುಂದಾಪುರ:ಬಂಜಾರ ಸಮುದಾಯದ ಮೂಲ ಗುರುಗಳಾದ ಶಿವಲಾಲ್ ಮಹಾರಾಜ್ ಜಯಂತಿ ಪ್ರಯುಕ್ತ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಬೈಂದೂರು ತಾಲೂಕಿನ ಸತೀಶ್ ಪೂಜಾರಿ ಮರವಂತೆ ಅವರನ್ನು ಬಂಜಾರ ಸಮುದಾಯದ ಕುಲ ಗುರುಗಳು ಸನ್ಮಾನಿಸಿದರು.

You cannot copy content of this page