ರಾಜ್ಯ ಮಟ್ಟದ ಕುಣಿತ ಭಜನೆ ಸ್ಪರ್ಧೆ,ಶ್ರೀರಾಧಾ ಕೃಷ್ಣ ಭಜನಾ ಮಂಡಳಿ ನೀರ್ಕೆರೆ ಪ್ರಥಮ

ಕುಂದಾಪುರ:ತಾಲೂಕಿನ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವ ಅಂಗವಾಗಿ ಆಯೋಜಿಸಿದ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀ ರಾಧಾ ಕೃಷ್ಣ ಭಜನಾ ಮಂಡಳಿ ನೀರ್ಕೆರೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.ಶ್ರೀ ರಾಮ ಯುವಕ ಮಂಡಲ ಬಟ್ಟೆಕುದ್ರು ದ್ವೀತಿಯ ಸ್ಥಾನ ಹಾಗೂ ಶ್ರೀ ಆಂಜನೇಯ ಭಜನಾ ಮಂಡಳಿ ಸಾಣೂರು ಕಾರ್ಕಳ ತೃತೀಯ ಸ್ಥಾನ,ಜೈ ಶ್ರೀರಾಮ ಭಜನಾ ಮಂಡಳಿ ಕಂಚಗೋಡು ನಾಲ್ಕನೇ ಸ್ಥಾನ,ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಪಾಡಿಗಾರ ಐದನೇ ಸ್ಥಾನವನ್ನು ಪಡೆದುಗೊಂಡಿದೆ.ಕುಣಿತಾ ಭಜನಾ […]

ಶ್ರೀಗುಹೇಶ್ವರ ದೇವಸ್ಥಾನ ಕೊಡಪಾಡಿ ಮಹಾಶಿವರಾತ್ರಿ ಮಹೋತ್ಸವ

ಕುಂದಾಪುರ:ತಾಲೂಕಿನ ಪುರಾಣ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀಗುಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.ಶಿವರಾತ್ರಿ ಮಹೋತ್ಸವ ಅಂಗವಾಗಿ ಗುಹೆಯಲ್ಲಿ ಅಂತರ್ಗತನಾದ ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಶಿವ ಸಹಸ್ರನಾಮ ಪಠಣ,ಭಜನಾ ಕಾರ್ಯಕ್ರಮ,ಗಣಹೋಮ,ಶತರುದ್ರಾಭಿಷೇಕ,ರುದ್ರ ಹೋಮ,ಹಣಬಿನ ಸೇವೆ,ಮಹಾಮಂಗಳಾರತಿ,ಪ್ರಸಾದ ವಿತರಣೆ,ಯಕ್ಷಗಾನ ಕಾರ್ಯಕ್ರಮ ಜರುಗಿತು.ನಾನಾ ಭಾಗಗಳಿಂದ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.

ಕೆ.ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆಗೆ ಸ್ವಾಗತ,ಪಕ್ಷ ಘೋಷಿಸಿದ ಅಭ್ಯರ್ಥಿಗೆ ಬೆಂಬಲ

ಕುಂದಾಪುರ:ಕಾಂಗ್ರೆಸ್ ಪಕ್ಷ ಸೇರುವವರನ್ನು ಸ್ವಾಗತಿಸುವುದಾಗಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಹಾಗೂ ಪಕ್ಷದ ಹಿರಿಯ ಮುಖಂಡರು ಹೇಳಿದ್ದು, ಪಕ್ಷದ ನಿಲುವಿಗೆ ನಮ್ಮ‌ ಸಹಮತ ಇರುವುದಾಗಿ ಮಾಜಿ‌ ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ. ದಿ‌ನೇಶ್ ಹೆಗ್ಡೆ ಮೊಳಹಳ್ಳಿ ಮುಂತಾದವರು ಜಂಟಿ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.ಮಾಜಿ‌ ಸಂಸದರಾಗಿರುವ ಕೆ. ಜಯಪ್ರಕಾಶ್ ಹೆಗ್ಡೆಯವರು ಮರಳಿ ಕಾಗ್ರೆಸ್ ಪಕ್ಷ‌ ಸೇರ್ಪಡೆಯಾಗುವ ಕುರಿತು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಮಾತುಕತೆ ನಡೆಯುತ್ತಿರುವ ಬಗ್ಗೆ ಮಾಹಿತಿಗಳಿದ್ದು, ಹಿಂದೆ […]

You cannot copy content of this page