ಕೆರಾಡಿ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ ನಟ ರಿಷಬ್ ಶೆಟ್ಟಿ

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಕೆರಾಡಿ ಶಾಲೆಯಲ್ಲಿ ಶಾಲಾ ಎಸ್ ಡಿಎಂಸಿ ಮತ್ತು ರಿಷಬ್ ಶೆಟ್ಟಿ ಫೌಂಡೇಶನ್ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರು, ಗ್ರಾಮಸ್ಥರು,ಮಕ್ಕಳ ಪೋಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸರಕಾರಿ ಹಿರಿಯ ಪ್ರಾಥಮಿಕ ಯಳಜಿತ್ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ಬೈಂದೂರು:ಸರಕಾರಿ ಹಿರಿಯ ಪ್ರಾಥಮಿಕ ಯಳಜಿತ್ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಗುರುವಾರ ಅದ್ದೂರಿಯಾಗಿ ನಡೆಯಿತು.ಶಾಲಾ ಎಸ್ ಡಿಎಂಸಿ ಅಧ್ಯಕ್ಷ ರವೀಂದ್ರ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.ವಿದ್ಯಾರ್ಥಿ ನಾಯಕ ಓಂ ಗಣೇಶ್ ನೇತೃತ್ವದ ತಂಡದಿಂದ ಮೆರವಣಿಗೆ,ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ರವೀಂದ್ರ ಶೆಟ್ಟಿ ವಹಿಸಿದ್ದರು.ಶತಮಾನೋತ್ಸವ ಸಮಿತಿ ಅಧ್ಯಕ್ಷ ವಕೀಲರಾದ ಮಂಗೇಶ್ ಶಾನುಭಾಗ್,ಶಾಲಾ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಮಂಜಯ್ಯ ಪೂಜಾರಿ,ಅಧ್ಯಕ್ಷ ರಮೇಶ್ ಪೂಜಾರಿ,ಖಜಾಂಜಿ ಕೆ.ಎಂ ಕೊಠಾರಿ,ಸ್ಮರಣ ಸಂಚಿಕೆ ಸಮಿತಿ […]

ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನ ವಿದ್ಯಾರ್ಥಿ ಸಾನಿಧ್ಯ ಮೊಗವೀರ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ವತಿಯಿಂದ ನಡೆದ ಬೈಂದೂರು ವಲಯ ಮಟ್ಟದ 14 ರ ವಯೋಮಾನದ ಹುಡುಗಿಯರ ರಿದಮಿಕ್ ಯೋಗ ವಿಭಾಗದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನ 6ನೇ ತರಗತಿ ವಿಧ್ಯಾರ್ಥಿನಿ ಸಾನಿಧ್ಯ ಎಸ್ ಮೊಗವೀರ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.ಹುಡುಗರ ರಿದಮಿಕ್ ಯೋಗ ವಿಭಾಗದಲ್ಲಿ ವಂಶಿತ್ 6ನೇ ತರಗತಿ ದ್ವಿತೀಯ ಸ್ಥಾನ ಗಳಿಸಿರುತ್ತಾನೆ.17 ರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ.ಶಾಲೆಯ 10ನೇ ತರಗತಿ ವಿದ್ಯಾರ್ಥಿ ವಿಕಾಸ ದ್ವಿತೀಯ ಸ್ಥಾನ […]

You cannot copy content of this page