71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮ
ಕುಂದಾಪುರ:ಶ್ರೀ ಗಣೇಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಳ್ಳಿಕಟ್ಟೆ-ಹೊಸಾಡು ಶಾಖೆ ವತಿಯಿಂದ 71ನೇ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮ ದಿ.ಜಿಎಸ್ ಆಚಾರ್ಯ ಸ್ಮಾರಕ ಸಭಾಭವನ ಮುಳ್ಳಿಕಟ್ಟೆಯಲ್ಲಿ ಬುಧವಾರ ನಡೆಯಿತು.ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ ಅವರು ಸಹಕಾರ ಕಾಯಿದೆ,ನಿಯಮಗಳ ಬಗ್ಗೆ ಹಾಗೂ ಸಹಕಾರಿ ಸಪ್ತಾಹ ಆಚರಣೆಯ ಉದ್ದೇಶದ ಕುರಿತು ಮಾಹಿತಿಯನ್ನು ನೀಡಿದರು. ಸಂಘದ ಅಧ್ಯಕ್ಷ ಮುರಳೀಧರ ಐತಾಳ್ ಅಧ್ಯಕ್ಷತೆ ವಹಿಸಿದ್ದರು.ಸಂಘದ ಸಲಹೆಗಾರ ಡಿ.ಎಂ ಕಾರಂತ ಮತ್ತು ಎಲ್ಲಾ ನಿರ್ದೇಶಕರು,ನಿವೃತ್ತ ನೌಕರರ ಸಂಘದ ಅಧ್ಯಕ್ಷ […]