ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ

ಕುಂದಾಪುರ:ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಿಭಾಗದ ಪೆÇೀಷಕರ ಸಭೆ ನಡೆಯಿತು.ಪೋಷಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಗಣೇಶ ಮೊಗವೀರ ಮಾತನಾಡಿ ವರ್ಷದ ಶೈಕ್ಷಣಿಕ ಕಾರ್ಯಕಲಾಪ ಹಾಗೂ ಬದಲಾದ ಪರೀಕ್ಷಾ ಪದ್ದತಿಯ ಬಗ್ಗೆ ತಿಳಸಿದರು.ಸಂಪನ್ಮೂಲ ವ್ಯಕ್ತಿ ಸುನಿಲ್ ಸ್ಪರ್ಧಾತ್ಮಕ ಪರೀಕ್ಷೆಗಳ ನೋಂದಾವಣೆಗೆ ವಿದ್ಯಾರ್ಥಿ ದಾಖಲೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ಕಾಲೇಜಿನ ವೈಸ್ ಪ್ರಿನ್ಸಿಪಾಲ್ ರಮೇಶ್ ಪೂಜಾರಿ ಸ್ವಾಗತಿಸಿದರು.ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿ,ವಂದಿಸಿದರು.

ಕಡಲಿನ ತೆರೆಯಲ್ಲಿ ಸಿಲುಕಿದ ಕಡಲಾಮೆ ರಕ್ಷಣೆ

ಕುಂದಾಪುರ:ಕೈ,ಕಾಲು ಮುರಿತಕ್ಕೆ ಒಳಗಾಗಿ ಮರವಂತೆ ಬೀಚ್ ಬಳಿ ಕಡಲಿನ ತೆರೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಬಿಳಿ ಮೈ ಬಣ್ಣವನ್ನು ಹೊಂದಿರುವ ಬೃಹತ್ ಗಾತ್ರದ ಕಡಲಾಮೆಯನ್ನು ಜೀವ ರಕ್ಷಕ ತಂಡದ ಸದಸ್ಯರು ಕಡಲಿಗೆ ಇಳಿದು ರಕ್ಷಣೆ ಮಾಡಿ ಸಂಬಂಧಿಸಿದ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.ಮುಳುಗು ತಜ್ಞ ದಿನೇಶ್ ಖಾರ್ವಿ,ವೆಂಕಟೇಶ ಖಾರ್ವಿ,ಸಚಿನ್ ಖಾರ್ವಿ,ವಿಶ್ವನಾಥ ಖಾರ್ವಿ,ಸಚಿನ್,ಸಂತೋಷ ಖಾರ್ವಿ,ಶರತ್ ಖಾರ್ವಿ,ಆದರ್ಶ ಖಾರ್ವಿ,ಧನುಷ್ ಕಾರ್ಯಾಚರಣೆಯಲ್ಲಿ ಭಾಗಿ ಆಗಿದ್ದರು.

ಸಮುದ್ರದಲ್ಲಿ ನಾಪತ್ತೆ ಆದ ಯುವಕ,ಶವವಾಗಿ ಪತ್ತೆ

ಕುಂದಾಪುರ:ತ್ರಾಸಿ-ಮರವಂತೆ ಬೀಚ್‍ನಲ್ಲಿ ಸಮುದ್ರಕ್ಕೆ ಇಳಿದು,ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಮಂಗಳವಾರ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವಂಡಿ ನಿವಾಸಿ ಫೀರಸಾಬ ನದಾಫ (22) ಎನ್ನುವ ಯುವಕ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸನ್ಯಾಸಿ ಬಲೇ ಎಂಬಲ್ಲಿ ಸಮುದ್ರ ತೀರದ ಬಳಿ ಬುಧವಾರ ಶವವಾಗಿ ಪತ್ತೆ ಆಗಿದ್ದಾನೆ.ಗಂಗೊಳ್ಳಿ ಠಾಣೆಯ ಪಿಎಸ್‍ಐ ಹರೀಶ್ ನಾಯ್ಕ್ ಮತ್ತು ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.24/7 ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಶವವನ್ನು ಶವಾಗಾರಕ್ಕೆ ಸಾಗಿಸಲು ಸಹರಿಸಿದರು.

You cannot copy content of this page