ಸೇತುವೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ

ಕುಂದಾಪುರ:ಗಂಗೊಳ್ಳಿ ಭಾಗದ ಜನರ ಬಹುಕಾಲದ ಬೇಡಿಕೆಯಾದ ಕುಂದಾಪುರ-ಗಂಗೊಳ್ಳಿ ಸಂಪರ್ಕಕ್ಕೆ ಸೇತುವೆ ನಿರ್ಮಾಣ ಮಾಡಲು ಹಾಗೂ ರಸ್ತೆ ಅಭಿವೃದ್ಧಿಗೊಳಿಸಲು ಅನುದಾನ ಬಿಡುಗಡೆ ಮಾಡುವಂತೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿಕಾಸ ಸೌಧದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿಯನ್ನು ನೀಡಿದರು.

ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಪ್ರಕರಣ:ಎಸ್.ಐ.ಟಿ ತನಿಖೆಗೆ ವಹಿಸುವಂತೆ ಮನವಿ

ಕುಂದಾಪುರ:ಉಡುಪಿಯಲ್ಲಿನ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆಗೆ ವರ್ಗಾಯಿಸಲು ರಾಜ್ಯ ಸರಕಾರಕ್ಕೆ ಆದೇಶ ನೀಡುವಂತೆ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಕರಾವಳಿ ಭಾಗದ ಶಾಸಕರ ನಿಯೋಗವು ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು.ಕರಾವಳಿ ಭಾಗದ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾದ ಬೈಂದೂರು ತಾಲೂಕಿನಲ್ಲಿ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲು ಹಾಗೂ ಸಹಕಾರ ನೀಡುವಂತೆ ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. […]

ಆ.5 ರಂದು ಯೋಗ ಪರ್ಯಟನ,ಸತ್ಸಂಗ ಕಾರ್ಯಕ್ರಮ

ಕುಂದಾಪುರ:ವಿವೇಕ ಜಾಗ್ರತ ಬಳಗ ಮಧ್ಯ ವಲಯ,ನಾಲ್ಕು ಡಿವೈನ್ ಪಾರ್ಕ್ ಟ್ರಸ್ಟ್ ರಿಜಿಸ್ಟರ್ ಸಾಲಿಗ್ರಾಮ ಅವರ ಅಂಗಸಂಸ್ಥೆ,ಯೋಗ ಪರ್ಯಟನ ವಿಶೇಷ ಸತ್ಸಂಗ ಕಾರ್ಯಕ್ರಮ ನಾಗೂರುಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಆ.5 ರಂದು ಶನಿವಾರ ಮಧ್ಯಾಹ್ನ 3 ರಿಂದ 5 ಗಂಟೆಯ ವರಗೆ ಜರುಗಲಿದೆ.ಯೋಗ ಪರ್ಯಟನ ಎಂಬ ವಿಶಿಷ್ಟ ಕಾರ್ಯಕ್ರಮದೊಂದಿಗೆ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ 17 ಜಿಲ್ಲೆಗಳಲ್ಲಿ ಜನರ ಅಭೂತಪೂರ್ವ ಸ್ಪಂದನೆ ಯೊಂದಿಗೆ ಕಾರ್ಯಕ್ರಮ ನಡೆದಿದ್ದು.18 ನೇ ಕಾರ್ಯಕ್ರಮ ಉಡುಪಿ ಜಿಲ್ಲೆಯ ಭಾಗದಲ್ಲಿ ನಡೆಯಲಿದೆ.

You cannot copy content of this page