ವಿಶೇಷ ಗ್ರಾಮ ಸಭೆ,ಕಾನೂನು ಮಾಹಿತಿ ಕಾರ್ಯಕ್ರಮ

ಕುಂದಾಪುರ:2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಗ್ರಾಮ ಸಭೆ ಹಾಗೂ ಕಾನೂನು ಮಾಹಿತಿ ಕಾರ್ಯಕ್ರಮ ಗುಜ್ಜಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ನಡೆಯಿತು.ಗುಜ್ಜಾಡಿ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಅಧ್ಯಕ್ಷತೆಯನ್ನು ವಹಿಸಿದ್ದರು,ವಕೀಲರಾದ ಚಂದ್ರಕಾಂತ್ ನಾಯಕವಾಡಿ ಕಾನೂನು ಮಾಹಿತಿ ನೀಡಿದರು.ಪಂಚಾಯತ್ ಸದಸ್ಯರು,ನೋಡಲ್ ಅಧಿಕಾರಿ ರಾಜ್ ಕುಮಾರ್,ಸಮಾಜ ಕಲ್ಯಾಣ ಇಲಾಖೆ ಪ್ರಭಾ,ಪೊಲೀಸ್ ಇಲಾಖೆ ಸಿಬ್ಬಂದಿಗಳು,ಆಡಳಿತಾಧಿಕಾರಿ ಸೋಮಪ್ಪ,ಆರೋಗ್ಯ ಇಲಾಖೆ ಸಿಬ್ಬಂದಿಗಳು,ಪಂಚಾಯತ್ ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾನೆಟ್ ಇಳಿಸುವಾಗ ಮೈಮೇಲೆ ಬಿದ್ದು:ಇಬ್ಬರು ದಾರುಣ ಸಾವು

ಉಡುಪಿ:ಮಲ್ಪೆ ತೊಟ್ಟಂ ಎಂಬಲ್ಲಿ ಲಾರಿಯಿಂದ ಗ್ರಾನೆಟ್ ಇಳಿಸುವಾಗ ಮೈಮೇಲೆ ಬಿದ್ದು ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರಾದ ಬಾಬುಲ್ಲ ಮತ್ತು ಭಾಸ್ಕರ ಎನ್ನುವ ವ್ಯಕ್ತಿಗಳಿಬ್ಬರು ಮೃತಪಟ್ಟ ಘಟನೆ ಗುರುವಾರ ನಡೆದಿದೆ.ಈಶ್ವರ ಮಲ್ಪೆ ಮತ್ತು ತಂಡದವರು ಘಟನೆ ಸ್ಥಳಕ್ಕೆ ಆಗಮಿಸಿ ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ಉದ್ಯಮಿ ಜಗದೀಶ್ ಶೆಟ್ಟಿ ಕುದ್ರುಕೋಡು ಅವರಿಗೆ ಪ್ರಶಸ್ತಿ

ಕುಂದಾಪುರ:ಬೈಂದೂರು-ಉಪ್ಪುಂದದಲ್ಲಿ ನಡೆಯುತ್ತಿರುವ 19ನೇ ಜೇಸಿ ಸಪ್ತಾಹ ದಿಗ್ವಿಜಯ-2023 ರ ಕಾರ್ಯಕ್ರಮದಲ್ಲಿ ಉದ್ಯಮಿ ಕನಕ ಗ್ರೂಪ್ಸ್ ಆಫ್ ಕಂಪನೀಸ್ ಜಗದೀಶ ಶೆಟ್ಟಿ ಕುದ್ರುಕೋಡು ಅವರಿಗೆ ಸಾಧನ ಶ್ರೀ ಉದ್ಯಮರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

You cannot copy content of this page