ಕುಂದಾಪುರ-ಬೈಂದೂರು ವಲಯ ಲಾರಿ ಟೆಂಪೋ ಮಾಲೀಕರು ಚಾಲಕರ ಸಂಘದ ತುರ್ತು ಸಭೆ

ಉಡುಪಿ:ಕುಂದಾಪುರ ಮತ್ತು ಬೈಂದೂರು ವಲಯದ ಲಾರಿ ಮತ್ತು ಟೆಂಪೋ ಮಾಲಿಕರು ಹಾಗೂ ಚಾಲಕರ ಸಂಘದ ತುರ್ತು ಸಭೆ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ಬುಧವಾರ ನಡೆಯಿತು.ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆಗೆ ಅವರಿಗೆ ಮನವಿಯನ್ನು ನೀಡಲಾಯಿತು. ಕುಂದಾಪುರ ಮತ್ತು ಬೈಂದೂರು ವಲಯದ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಜಂಟಿ ಅಧ್ಯಕ್ಷ ದಿವಾಕರ ಶೆಟ್ಟಿ ಮಾತನಾಡಿ,ಈ ಹಿಂದೆ ಕೆಂಪು ಕಲ್ಲು ಮತ್ತು ಮಣ್ಣು ಸಾಗಾಟ ಮಾಡಲು ಕೃಷಿ ಅಭಿವೃದ್ಧಿ ಉದ್ಧೇಶದಿಂದ 3ಎ ಅಡಿಯಲ್ಲಿ ಪರ್ಮಿಟ್ […]

ಗಂಗೊಳ್ಳಿ:ಅರುಣ ನಾಪತ್ತೆ

ಕುಂದಾಪುರ:10ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಅರುಣ (15) ಎನ್ನುವ ಬಾಲಕ ಸೆ.20 ರಂದು ಮಧ್ಯಾಹ್ನ 3 ಗಂಟೆಗೆ ಕುಂದಾಪುರಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದು ಈ ವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.ಪಿರ್ಯಾದಿದಾರರ ತಮ್ಮ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋದಿ ಮೈ ಬಣ್ಣವನ್ನು ಹೊಂದಿರುವ ಅರುಣ 5 ಅಡಿ ಎತ್ತರವಿದ್ದು,ಕಪ್ಪನೆ ಕೂದಲು,ಸಾಧಾರಣ ಮೈ ಕಟ್ಟು ಹೊಂದಿರುತ್ತಾನೆ.ಮನೆಯಿಂದ ಹೊರಡುವ ವೇಳೆ ಕಪ್ಪು ಬಣ್ಣದ ಅರ್ಧ ತೋಳಿನ ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ ಪ್ಯಾಂಟ್ ಧರಿಸಿದ್ದು […]

ಗಂಗೊಳ್ಳಿ:ವಿಕಾಸ್ ಖಾರ್ವಿಗೆ ಸನ್ಮಾನ

ಕುಂದಾಪುರ:ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಸರ್.ಎಂ ವಿಶ್ವೇಶ್ವರಯ್ಯನವರ ಜನ್ಮ ಜಯಂತಿಯನ್ನು ಆಚರಿಸಲಾಯಿತು.ಸಿವಿಲ್ ಇಂಜಿನಿಯರ್ ವಿಕಾಸ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.ಕ್ಲಬ್ಬಿನ ಅಧ್ಯಕ್ಷ ನಾಗೇಂದ್ರ ಪೈ,ರಾಮನಾಥ್,ಕಾರ್ಯದರ್ಶಿ ಕೃಷ್ಣ ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

You cannot copy content of this page