ಸುಭಾಶ್ಚಂದ್ರ ಪೂಜಾರಿ ನಿಧನ

ಗಂಗೊಳ್ಳಿ:ಉದ್ಯಮಿ ಸುಭಾಶ್ಚಂದ್ರ ಪೂಜಾರಿ (52) ಹೃದಯಾಘಾತದಿಂದ ಬುಧವಾರ ನಿಧನರಾದರು.ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು,ಬಿಲ್ಲವ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.ಉತ್ತಮ ಕರಾಟೆ ಪಟುವಾಗಿದ್ದ ಸುಭಾಶ್ಚಂದ್ರ ಪೂಜಾರಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿದ್ದರು.ಅವರಿಗೆ ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಶ್ರೀನಾಗಾನುಗ್ರಹ ಪ್ರಶಸ್ತಿ ಪ್ರದಾನ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಶ್ರೀ ಸುಬ್ರಹ್ಮಣ್ಯ,ಶ್ರೀ ವಿದ್ಯಾಗಣಪತಿ,ಶ್ರೀ ನವಗ್ರಹ ದೇವಸ್ಥಾನದಲ್ಲಿ 9ನೇ ವರ್ಷದ ನಾಗರ ಪಂಚಮಿ ಹಬ್ಬ ಮತ್ತು ಶ್ರೀ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನದೊಂದಿಗೆ ಶುಕ್ರವಾರ ನಡೆಯಿತು.ವಾಸ್ತು ತಜ್ಞ,ಯಕ್ಷಗಾನ ಪ್ರಸಂಗ ಕರ್ತರಾದ ಜ್ಯೋತಿಷಿ ಡಾ.ಬಸವರಾಜ್ ಶೆಟ್ಟಿಗಾರ್ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಪ್ಪುಂದ ರಾಘವೇಂದ್ರಸ್ವಾಮಿ ಮಠದ ವಿಚಾರಣಾಕರ್ತ ಸುಭಾಶ್ಚಂದ್ರ ಪುರಾಣಿಕ ಉದ್ಘಾಟಿಸಿದರು.ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಶುಭಾಂಶನೆಗೈದರು.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ರಾಜು […]

ಮಂಜುನಾಥ ಸಾಲಿಯಾನ್ ಪರಿಯಾಳ ಸಮಾಜ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆ

ಕುಂದಾಪುರ:ಪರಿಯಾಳ ಸಮಾಜ ಮಹಾಸಭಾ ಮಂಗಳೂರು ಅದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಂಜುನಾಥ್ ಸಾಲಿಯಾನ್ ತ್ರಾಸಿ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಪ್ರವೀಣ್ ಸಾಲಿಯಾನ್ ಕಾಫಿ ಕಾಡು ಮಂಗಳೂರು,ಕಾರ್ಯದರ್ಶಿಯಾಗಿ ಸಂದೀಪ್ ಸಾಲಿಯಾನ್ ಹಾರಾಡಿ,ಕೋಶಾಧಿಕಾರಿಯಾಗಿ ಗೌತಮ್ ಬಂಗೇರ ಕರಂಬಾರು ಆಯ್ಕೆಯಾಗಿದ್ದಾರೆ.ಇತ್ತೀಚಿಗೆ ಪರಿಯಾಳ ಸಮಾಜ ಸಮುದಾಯ ಭವನ ಉಚ್ಚಿಲದಲ್ಲಿ ನಡೆದ ಸಂಘದ ಎರಡನೇ ವಾರ್ಷಿಕ ಮಹಾಸಭೆಯಲ್ಲಿ ಮಹಾಸಭಾದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಸರ್ವಸದಸ್ಯರು ಉಪಸ್ಥಿತರಿದ್ದರು.

You cannot copy content of this page