ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ,ಬೃಹತ್ ಮಾನವ ಸರಪಳಿ ರಚನೆ

Share

Advertisement
Advertisement

ಕುಂದಾಪುರ:ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕರ್ನಾಟಕ ಸರಕಾರ,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಸಮಾಜ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಬೈಂದೂರು ತಾಲೂಕು ಆಡಳಿತ ಮತ್ತು ಕುಂದಾಪುರ ತಾಲೂಕು ಆಡಳಿತ,ತ್ರಾಸಿ ಮತ್ತು ಮರವಂತೆ ಪಂಚಾಯಿತಿ ಸಹಕಾರದೊಂದಿಗೆ ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್‍ನಲ್ಲಿ ಮಾನವ ಸರಪಳಿ,ತಾಯಿಯ ಹೆಸರಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.
ಸಂವಿಧಾನ ಪೀಠಿಕೆಯನ್ನು ಓದುವುದರ ಮುಖೇನ ಮಾನವ ಸರಪಳಿಯನ್ನು ರಚಿಸಲಾಯಿತು.ಕುಣಿತ ಭಜನೆ,ಚಂಡೆವಾದನ,ಯಕ್ಷಗಾನ ಮತ್ತು ಟ್ಯಾಬ್ಲೋ ವೇಷ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತು.
ಜಿಲ್ಲೆಯ ಗಡಿ ಭಾಗ ಶಿರೂರು ಗೇಟ್ ನಿಂದ ಉಡುಪಿ ಹೇಜಮಾಡಿ ತನಕ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆರಾಧನೆ ಮಾಡುವುದು,ಅನುಕರಣೆ ಮಾಡುವುದು ರೋಮಾಂಚನಕಾರಿ ಅನುಭವನ್ನು ಕೊಡುತ್ತದೆ.ಪ್ರಜಾಪ್ರಭುತ್ವ ಸೌಂದರ್ಯವನ್ನು ಕಾಣಲು ಇಂತಹ ಕಾರ್ಯಕ್ರಮಗಳು ಬಹಳಷ್ಟು ಅರ್ಥಪೂರ್ಣವಾಗಿರುತ್ತದೆ ಎಂದರು.
ಬೈಂದೂರು ತಾಲೂಕಿನ ತಹಶೀಲ್ದಾರ್ ಪ್ರದೀಪ್ ಮಾತನಾಡಿ,ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಎಲ್ಲರಿಗೂ ವಂದನೆಯನ್ನು ಸಲ್ಲಿಸಿದರು.
ಬೈಂದೂರು ಇಒ ಭಾರತಿ ಮಾತನಾಡಿ,ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಕ್ಷೇತ್ರದ ಶಾಸಕರು,ಜನಪ್ರತಿನಿಧಿಗಳ ಸಹಕಾರದಿಂದ ಶಿರೂರು ಗೇಟ್ ನಿಂದ ತ್ರಾಸಿ-ಮರವಂತೆ ಬೀಚ್ ತನಕ ಮಾನವ ಸರಪಳಿ ಕಾರ್ಯಕ್ರಮ ನೂರಷ್ಟು ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ,ಮರವಂತೆ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಖಾರ್ವಿ,ಕುಂದಾಪುರ ಬಿಇಒ ಶೋಭಾ ಶೆಟ್ಟಿ,ಬೈಂದೂರು ವೃತ್ತ ನಿರೀಕ್ಷ ಸವಿತ್ರ ತೇಜ,ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ಆರ್ ಮತ್ತು ಗುಪ್ತದಳ ಪಿಎಸ್‍ಐ ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿಗಳು,ಆರ್‍ಎಫ್‍ಒ ಜ್ಯೋತಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು,ನಾನಾ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು,ಕೆಸಿಡಿಸಿ ಸಿಬ್ಬಂದಿಗಳು,ಆರೋಗ್ಯ ಇಲಾಖೆ ಸಿಬ್ಬಂದಿಗಳು,ಸಂಜೀವಿನಿ ಸಂಘದ ಸದಸ್ಯರು,ವಿವಿಧ ಪಂಚಾಯಿತಿಗಳ ಸಿಬ್ಬಂದಿಗಳು,ಇತರ ಇಲಾಖೆಗಳ ಅಧಿಕಾರಿಗಳು,ಸಾರ್ವಜನಿಕರು ಉಪಸ್ಥಿತರಿದ್ದರು.ತ್ರಾಸಿ ಪಂಚಾಯಿತಿ ಪಿಡಿಒ ಶೋಭಾ ಸ್ವಾಗತಿಸಿ,ವಂದಿಸಿದರು.

Advertisement

ವರದಿ:ಜಗದೀಶ್ ದೇವಾಡಿಗ
ಸುದ್ದಿ ಮತ್ತು ಜಾಹೀರಾತುಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ:9916284048

Advertisement
Advertisement


Share

Leave a comment

Your email address will not be published. Required fields are marked *

You cannot copy content of this page