ಸೆ.16 ರಂದು ಆಲೂರಿನಲ್ಲಿ ಶೋಷಿತ ಸ್ವಾಭಿಮಾನಿ ಸಮಾವೇಶ
ಕುಂದಾಪುರ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ,ತಾಲೂಕು ಸಮಿತಿ ಕುಂದಾಪುರ ಅದರ ಆಲೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಶೋಷಿತ ಸ್ವಾಭಿಮಾನಿ ಸಮಾವೇಶ (ದಲಿತ ಜನಗಳ ಕೊರಳ ಧ್ವನಿ) ಕಾರ್ಯಕ್ರಮ ಸೆ.16 ರ ಸೋಮವಾರ ದಂದು ಪೂರ್ವಾಹ್ನ 10 ಗಂಟೆಗೆ ಆಲೂರು ಮೂಕಾಂಬಿಕಾ ಸಭಾಭವನದಲ್ಲಿ ನಡೆಯಲಿದೆ.
ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಹಾಗೂ ಗಂಗೊಳ್ಳಿ ಠಾಣೆ ಪಿಎಸ್ಐ ಹರೀಶ್ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದು.ವಕೀಲರಾದ ಮಂಜುನಾಥ ಗಿಳಿಯಾರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.ಜಿಲ್ಲಾ ಹಾಗೂ ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘವು ವಿನಂತಿಸಿಕೊಂಡಿದೆ.