ತ್ರಾಸಿ:ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಶುಭಾರಂಭ




ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66 ರ ತ್ರಾಸಿ ಕೊಂಕಣ ಖಾರ್ವಿ ಸಭಾಂಗಣದ ಎದುರುಗಡೆ ನೂತನವಾಗಿ ನಿರ್ಮಾಣಗೊಂಡಿರುವ ಧನುಷ್ ಟವರ್ಸ್ ಹೋಟೆಲ್ ಪಿಜಿಬಿ ಬೀಚ್ ರೆಸಿಡೆನ್ಸಿ ಬೋಡಿರ್ಂಗ್ & ಲಾಡ್ಜಿಂಗ್‍ನಲ್ಲಿ ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಅದರ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ಅದ್ದೂರಿಯಾಗಿ ನಡೆಯಿತು.
ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಶುಭಾರಂಭ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರ ನೇತೃತ್ವದಲ್ಲಿ ಗಣಹೋಮ,ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.
ವಿಶ್ವ ಪ್ರಸಿದ್ಧ ಪ್ರಮುಖ ಪ್ರವಾಸಿ ತಾಣವಾದ ತ್ರಾಸಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಧನುಷ್ ಟವರ್ಸ್ ಹೋಟೆಲ್ ಪಿಜಿಬಿ ಬೀಚ್ ರೆಸಿಡೆನ್ಸಿಯಲ್ಲಿ ಶುಭಾರಂಭ ಗೊಂಡಿರುವ ಮುಂಬೈನ ಪ್ರತಿಷ್ಠಿತ ಡೈಟಿಕೋ ಸಂಸ್ಥೆಯ ಅಂಗ ಸಂಸ್ಥೆಯಾದ ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ನಲ್ಲಿ ಎಸಿ,ನಾನ್ ಎಸಿ ಮಲ್ಟಿಕುಶನ್ ವೆಜ್ & ನಾನ್ ವೆಜ್ ,ಬಾರ್ ಮತ್ತು ರೆಸ್ಟೋರೆಂಟ್,ಎಸಿ ನಾನ್ ಎಸಿ ಸುಸಜ್ಜಿತವಾದ ಡಬ್ಬಲ್ ಮತ್ತು ಸಿಂಗಲ್ ಬೆಡ್ ರೂಂ,ವಿಶಾಲವಾದ ಪಾಕಿರ್ಂಗ್ ವ್ಯವಸ್ಥೆ ಹೊಂದಿದೆ.
ಹುಟ್ಟು ಹಬ್ಬದ ಕಾರ್ಯಕ್ರಮ,ಸಭೆ ಸಮಾರಂಭ ಕಾರ್ಯಕ್ರಮ ನಡೆಸಲು ಪಾರ್ಟಿ ಹಾಲ್ ಲಭ್ಯವಿದ್ದು 250 ರಿಂದ 300 ಜನರನ್ನು ಸೇರಿಸ ಬಹುದಾಗಿದೆ.
ಸೆಂಟ್ರಲ್ ಕಿಚನ್ ಆರಂಭಗೊಳ್ಳಲಿದ್ದು ಸುಸಜ್ಜಿತವಾದ ಊಟವನ್ನು ಕ್ಯಾಟರಿಂಗ್ ವ್ಯವಸ್ಥೆಯಡಿ ಮನೆಗಳಿಗೆ ನೇರವಾಗಿ ಖಾದ್ಯವನ್ನು ಕಳುಹಿಸಲಾಗುತ್ತದೆ.
ಎಲ್ಲಾ ರೀತಿಯ ಸೌಲಭ್ಯ ಒಂದೇ ಸೂರಿನಡಿ ದೊರೆಯುತ್ತಿರುವುದರಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಭಾಗದ ಜನರಿಗೆ ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಉತ್ತಮ ಸೇವೆ ಮುಖೇನ ಮುಂಬೈ ನಗರದಲ್ಲಿ ಹೆಸರನ್ನು ಗಳಿಸಿರುವ ಡೈಟಿಕೋ ಸಂಸ್ಥೆಯ ಅಂಗ ಸಂಸ್ಥೆಯಾದ ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಗೆ ಗ್ರಾಹಕರು ಭೇಟಿ ನೀಡಿ ಸುಸಜ್ಜಿತವಾದ ಖಾದ್ಯವನ್ನು ಸವಿಯಬಹುದು.
ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟಿಸಿ ಮಾತನಾಡಿ,ಗ್ರಾಹಕರಿಗೆ ಉತ್ತಮ ರೀತಿಯ ಪ್ರಯೋಜನವನ್ನು ಕೊಟ್ಟು ಅವರಿಂದ ಫಲ ಪಡೆದು ಕೊಳ್ಳುವುದು ವ್ಯವಹಾರದ ಲಕ್ಷಣವಾಗಿದೆ.ಧರ್ಮ ಮಾರ್ಗದಲ್ಲಿ ನಡೆಯುವುದರಿಂದ ಯಶಸ್ಸನ್ನು ನಾವು ಗಳಿಸಬಹುದು.ಉದ್ಯಮದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಕೊಳ್ಳುವುದು ಬಹಳ ಮುಖ್ಯವಾಗಿದ್ದು ಸಾಮಾಜಿಕವಾಗಿ ಚಿಂತೆ ಇಟ್ಟು ಕೊಂಡಾಗ ಸಮಾಜ ಸುಭೀಕ್ಷೆ ಇಂದ ಇರುತ್ತದೆ ಎಂದು ಹೇಳಿದರು.ನಾವು ಮಾಡಿದಂತಹ ದುಡಿಮೆ ಕುಟುಂಬದ ನಿರ್ವಹಣೆ ಸಹಿತ ಸಾಮಾಜಿಕ ಕಾರ್ಯಗಳಲ್ಲಿಗೂ ಬಳಕೆ ಆಗುವಂತೆ ಆಗಬೇಕು ಇದು ಶುಭಷೀತ ಸಂದೇಶವಾಗಿದೆ.ದಾನ ಧರ್ಮ ಆಚರಣೆ ಯಿಂದ ಜೀವನ ಸಾರ್ಥಕ ಗೊಳ್ಳುತ್ತದೆ.ನಮ್ಮ ಸಂಪಾದನೆ ಉತ್ತಮ ಕಾರ್ಯಗಳಿಗೆ ವಿನಿಯೋಗ ಆಗಬೇಕು.ಸಂಸ್ಥೆಗೆ ಒಳಿತಾಗಲಿ ಎಂದು ಶುಭಹಾರೈಸಿದರು.ಧರ್ಮ ಕಾರ್ಯದ ಹುಚ್ಚು ಹಿಡಿಸಿ ಕೊಳ್ಳುವುದರಿಂದ ಕೆಟ್ಟ ಗುಣಗಳನ್ನು ತೋರೆದು ಹಾಕಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಧನುಷ್ ಟವರ್ಸ್ ಪಿಜಿಬಿ ಬೀಚ್ ರೆಸಿಡೆನ್ಸಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್,ಕಟ್ಟಡದ ಮಾಲೀಕರಾದ ಪರಮೇಶ್ವರ ಗಾಣಿಗ ಅವರನ್ನು ಡೈಟಿಕೋ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಗಂಗೊಳ್ಳಿ ಪಿಎಸ್ಐ ಬಸವರಾಜ ಕಣಶೆಟ್ಟಿ ಮಾತನಾಡಿ,ವಿಶ್ವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಉತ್ತಮ ಗುಣಮಟ್ಟದ ಹೋಟೆಲ್ ಅವಶ್ಯಕತೆ ಬಹಳಷ್ಟು ಇದ್ದಿದ್ದು.ದ್ವಾರಕಾ ಸಂಸ್ಥೆ ಶುಭರಂಭ ಗೊಂಡಿರುವುದರಿಂದ ಇವೊಂದು ಸಮಸ್ಯೆ ನೀಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತ್ರಾಸಿ ಪಂಚಾಯತ್ ಅಧ್ಯಕ್ಷ ಮಿಥುನ್ ಎಂಡಿ ದೇವಾಡಿಗ ಮಾತನಾಡಿ,ಉತ್ಸಾಹಿ ಯುವಕರ ತಂಡ ದಿಂದ ಅಚ್ಚುಕಟ್ಟಾದ ಹೋಟೆಲ್ ನಿರ್ಮಾಣ ಗೊಂಡಿದೆ.ಪ್ರವಾಸಿ ತಾಣದಲ್ಲಿ ಉತ್ತಮ ದರ್ಜೆ ಹೋಟೆಲ್ ನಿರ್ಮಾಣವಾಗಿರುವುದರಿಂದ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ದೊರಕಲಿದೆ ಎಂದರು.
ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಪಾಲುದಾರರಾದ ದಯಾನಂದ ಶ್ರೀಯಾನ್ ಮಾತನಾಡಿ,ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಉನ್ನತ ರೀತಿಯ ಹೋಟೆಲ್ ಸೌಲಭ್ಯ ಮತ್ತು ಗುಣ ಮಟ್ಟದ ಸೇವೆ ದೊರಕಬೇಕು ಎನ್ನುವ ಉದ್ದೇಶದಿಂದ ಇವೊಂದು ಪರಿಸರದಲ್ಲಿ ಹೋಟೆಲ್‍ನ್ನು ಆರಂಭಗೊಳಿಸಲಾಗಿದೆ.ಎಸಿ ನಾನ್ ಎಸಿ ರೂಂ ಸೌಲಭ್ಯ ಮತ್ತು ಬಾರ್ ಮತ್ತು ರೆಸ್ಟೋರೆಂಟ್ ಕೂಡ ಕಾರ್ಯಚರಣೆ ಮಾಡಲಿದೆ ಎಂದರು.ಸೆಂಟ್ರಲ್ ಕಿಚನ್ ವ್ಯವಸ್ಥೆ ಕೂಡ ಇದ್ದು ಸಭೆ ಸಮಾರಂಭಗಳಿಗೆ ಆಹಾರದ ಪೂರೈಕೆಯನ್ನು ಕೂಡ ಮಾಡಿಕೊಡಲಾಗುತ್ತದೆ.ಸ್ಥಳೀಯರು ಮತ್ತು ಗ್ರಾಹಕರು ನಮ್ಮ ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಹೇರಿಯ ಪೂಜಾರಿ,ಮಧುಕರ ಪೂಜಾರಿ,ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಪಾಲುದಾರರಾದ ಮಹೇಶ ಪೂಜಾರಿ,ಗಿರೀಶ್ ಶೆಟ್ಟಿ,ಕುಶಲ ಶೆಟ್ಟಿ,ನಾಗರಾಜ ದೇವಾಡಿಗ ಉಪಸ್ಥಿತರಿದ್ದರು.
ಉದ್ಯಮಿ ದಯಾನಂದ ಶ್ರೀಯಾನ್ ಸ್ವಾಗತಿಸಿದರು.ಭವ್ಯ ಮತ್ತು ಸುಲೇಖ ಪ್ರಾರ್ಥಿಸಿದರು.ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿ,ವಂದಿಸಿದರು.ಸಂಸ್ಥೆಯ ಪಾಲುದಾರರ ಬಂಧು ಮಿತ್ರರು,ಹಿತೈಷಿಗಳು,ಕುಟುಂಬಸ್ಥರು ಹೋಟೆಲ್ ಶುಭಾರಂಭ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.
ವರದಿ:ಜಗದೀಶ ದೇವಾಡಿಗ
ನಮ್ಮ ಜಾಲಾತಾಣದಲ್ಲಿ ಸುದ್ದಿ ಮತ್ತು ಜಾಹೀರಾತನ್ನು ಪ್ರಕಟಿಸಿಲು ಸಂಪರ್ಕಿಸಿ-9916284048