ಸರಕಾರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಎಸ್ ಡಿಎಂಸಿ
ಅಧ್ಯಕ್ಷ ಅಶ್ರಫ್ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ದೇವಾಡಿಗ,ಉಪಾಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ,ಗ್ರಾ. ಪಂ.ಸದಸ್ಯರು, ಎಸ್ ಡಿಎಂಸಿ ಸರ್ವಸದಸ್ಯರು,ಗಣಪಯ್ಯ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಹಿಶ್ ಹೊಳ್ಮಗೆ,ಲಯನ್ಸ್ ಕ್ಲಬ್ ಹಕ್ಲಾಡಿ ಸದಸ್ಯರು,ನಿವೃತ್ತ ಮುಖ್ಯ್ಯೊಪಾಧ್ಯಾಯರು, ಅಧ್ಯಾಪಕರು,
ವಿದ್ಯಾಭಿಮಾನಿಗಳು, ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಗೀತಾ ಬಿ ಸ್ವಾಗತಿಸಿ,ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕ ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶಿವರಾಜ್ ವಂದಿಸಿದರು. ಶಿಕ್ಷಕಿಯರಾದ ಶ್ಯಾಮಲಾ, ಜ್ಯೋತಿ,ಚಂದ್ರಿಕಾ,ಸೌಜನ್ಯ, ಅತಿಥಿ ಶಿಕ್ಷಕಿಯರಾದ ಶ್ವೇತಾ, ವಿನೋದ ಸಹಕರಿಸಿದರು. ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ,ಕಿರು ಪ್ರಹಸನ ನೆರವೇರಿತು.