ಸಾಮೂಹಿಕ ವರಮಹಾಲಕ್ಷ್ಮೀ ವ್ರತಾಚರಣೆ

ಕುಂದಾಪುರ:ದ್ರಾವಿಡ ಬ್ರಾಹ್ಮಣ ಪರಿಷತ್ ಗುಜ್ಜಾಡಿ ವಲಯದ ವತಿಯಿಂದ ವಾಸುದೇವ ಶಾಸ್ತ್ರೀ ಕೆಳಾಮಠ ಅವರ ಸಹಕಾರೊಂದಿಗೆ ಸಾಮೂಹಿಕ ವರಮಹಾಲಕ್ಷ್ಮೀ ವ್ರತಾಚರಣೆ ಕಾರ್ಯಕ್ರಮ ಹಾಗೂ ವಿಷ್ಣು ಸಹಸ್ರನಾಮ ಪಠಣ ಗುಜ್ಜಾಡಿ ಶ್ರೀ ಶೃಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು.
ದ್ರಾವಿಡ ಬ್ರಾಹ್ಮಣ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷ ಎಚ್.ಎಸ್ ಹತ್ವಾರ್,ಕೋಶಾಧಿಕಾರಿ ಪಿ.ರಘುರಾಮ್ ರಾವ್.ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಶಾಂತ ಗಣೇಶ,ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗಣೇಶ ರಾವ್,ಗುಜ್ಜಾಡಿ ವಲಯ ಅಧ್ಯಕ್ಷ ವಿಶ್ವಂಭರ ಐತಾಳ್ ಮತ್ತು ಕಾರ್ಯದರ್ಶಿ ಡಿ.ಎಂ ಕಾರಂತ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಸಂಧ್ಯಾ ಕಾರಂತ ಮತ್ತ ಸದಸ್ಯರು ಉಪಸ್ಥಿತರಿದ್ದರು.






















































































































































































































































































































































































































































































































































































































































































































































































































































































































































































































































































































































































































































































































































































































































































